Mysore
21
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ 

ಬೆಂಗಳೂರು : ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುವಾಹಟಿ – ಚೆನ್ನೈ ನಡುವಿನ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಜೂ.19 ಗುರುವಾರ ನಡೆದಿದೆ.

ವಿಮಾನ ಗುವಾಹಟಿಯಿಂದ ಚೆನ್ನೈಗೆ ತೆರಳುತ್ತಿತ್ತು. ಇಂಧನ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೈಲಟ್‌ ರೂಂಗೆ ಮೇಡೇ ಸಂದೇಶ ರವಾನಿಸಿದ್ದಾರೆ. ಕೊಡಲೇ ಅಧಿಕಾರಿಗಳು ವಿಮಾನವನ್ನು ಬೆಂಗಳೂರಿನಲ್ಲಿ ಸೇಫ್‌ ಲ್ಯಾಂಡ್‌ ಮಾಡಲು ಸೂಚಿಸಿದ್ದರು. ಇದರಂತೆ ಫೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದರು ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೊ 6E-6764 ವಿಮಾನ ಸಂಜೆ 4.40ಕ್ಕೆ ಗುವಾಹಟಿ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿತ್ತು. ಇದು 7.45ಕ್ಕೆ ಚೆನ್ನೈನಲ್ಲಿ ಲ್ಯಾಂಡ್‌ ಆಗಬೇಕಿತ್ತು. ಮಧ್ಯದಲ್ಲಿ ಇಂಧನ ಖಾಲಿಯ ಅಲರಾಂ ಸೂಚನೆ ಬಂದಿದ್ದರಿಂದ ವಿಮಾನ ಚೆನ್ನೈ ತಲುಪುವುದು ಅಸಾಧ್ಯವಾಗಿತ್ತು. ಈ ವೇಳೆ ಪೈಲಟ್‌ ಮೇಡೇ ಸಂದೇಶ ರವಾನಿಸಿ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದರು.

ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್‌, ಐವರು ಗಗನಸಖಿಯರು ಸೇರಿ 175 ಮಂದಿಯಿದ್ದರು.

Tags:
error: Content is protected !!