Mysore
24
moderate rain

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ | ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ಅಗತ್ಯ

ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶ ಬಂದಾಗಲೆಲ್ಲಾ ಶೇ. ೯೦ಕ್ಕಿಂತ ಹೆಚ್ಚು, ಅಷ್ಟೇ ಏಕೆ ನೂರಕ್ಕೆ ನೂರು ಅಂಕಗಳನ್ನು ಪಡೆದಿ ರುವ ಸಾವಿರಾರು ಪ್ರತಿಭೆಗಳು ಕಾಣಸಿಗುತ್ತಾರೆ. ಕಡುಬಡತನದಲ್ಲಿ ಓದಿ ಸಾಧನೆಗೈದ ವಿದ್ಯಾರ್ಥಿ ಗಳೂ ಇದರಲ್ಲಿ ಸೇರಿರುತ್ತಾರೆ. ಇಂತಹ ಪ್ರತಿಭಾವಂತ ಬಡ ವಿದ್ಯಾರ್ಥಿ ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡುವುದು ಮಾನವೀಯ ಕಾರ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ದಾನಿಗಳು ಹಾಗೂ ಸರ್ಕಾರ ಆರ್ಥಿಕ ನೆರವು ನೀಡುವುದು ಅತ್ಯಗತ್ಯ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags:
error: Content is protected !!