Mysore
31
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಶ್ರೀರಂಗಪಟ್ಟಣ| ರಸ್ತೆ ಬದಿ ಹೊತ್ತಿ ಉರಿದ ಬೈಕ್‌

ಶ್ರೀರಂಗಪಟ್ಟಣ: ಚಲಿಸುತ್ತಿದ್ದ ಬೈಕ್ ವೊಂದು ಇಂದು ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಉರಿದು ಭಸ್ಮವಾಗಿರುವ ಘಟನೆ ಶ್ರೀರಂಗಪಟ್ಟಣ ಬನ್ನೂರು ರಸ್ತೆಯಲ್ಲಿ ಗಾಡಿಜೋಗಿಹುಂಡಿ ಗ್ರಾಮದ ಬಳಿ ನಡೆದಿದೆ.

ಬೈಕ್ ಚಾಲಕ ಮತ್ತು ಹಿಂಬದಿ ಸವಾರರು ಬೈಕ್‌ನಲ್ಲಿ ಚಲಿಸುವಾಗ ಬೈಕ್‌ನ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಬೈಕ್ ಚಾಲಕ ರಸ್ತೆ ಬದಿ ಬೈಕ್ ನಿಲ್ಲಿಸುತ್ತಿದ್ದಂತೆ ಬೆಂಕಿ ಆವರಿಸಿ ಬೈಕ್ ಸಂಪೂರ್ಣ ಉರಿದು ಭಸ್ಮವಾಗಿದೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:
error: Content is protected !!