Mysore
24
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಓದುಗರ ಪತ್ರ: ಕೋಟ್ಯಂತರ ಭಾರತೀಯರ ಹೃದಯ ಗೆದ್ದ ಫೋಗಟ್

ಚಿನ್ನದ ಪದಕ ಗೆಲ್ಲುವ ಗುರಿಯಿತ್ತು, ಶ್ರಮವೂ ಇತ್ತು, ಕೋಟ್ಯಂತರ ಭಾರತೀಯರ ಭರವಸೆಯೂ ಆಕೆಯ ಮೇಲಿತ್ತು. ಇನ್ನೇನು ಗೆಲ್ಲಲು ಒಂದೇ ಮೆಟ್ಟಿಲು ಬಾಕಿ ಇದೆ ಎನ್ನುವಷ್ಟರಲ್ಲೇ ಭಾರತೀಯರಿಗೆ ಆಘಾತ ಎದುರಾಯಿತು.

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯೊಂದಿಗೆ 50 ಕೆ.ಜಿ. ಕುಸ್ತಿ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಅನ್ನು ಮಣಿಸಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಫೈನಲ್‌ಗೂ ಮುನ್ನ ನಡೆದ ತೂಕದ ಪರೀಕ್ಷೆಯಲ್ಲಿ 50 ಕೆ.ಜಿ.ಗಿಂತ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣದಿಂದಾಗಿ ಒಲಿಂಪಿಕ್ಸ್ ನಿಯಮಾವಳಿಗಳ ಪ್ರಕಾರ ಅನರ್ಹಗೊಂಡಿದ್ದಾರೆ. ಇದು ಕೋಟ್ಯಂತರ ಭಾರತೀಯರಿಗೆ ದೊಡ್ಡ ಆಘಾತ ನೀಡಿದೆ.

ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದ ವಿನೇಶ್ ಫೋಗಟ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದೇ ಒಂದು ದೊಡ್ಡ ಸವಾಲು. ಇದರ ನಡುವೆ ಆಕೆ ಫೈನಲ್ ತಲುಪಿ, ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಫೈನಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನ ಗೆದ್ದು ಬರುತ್ತಾರೆ ಎಂಬುದು ಭಾರತೀಯರ ಭರವಸೆಯಾಗಿತ್ತು.

ಆಕೆಯ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ಕೇವಲ 100 ಗ್ರಾಂ ತೂಕದ ಅಂತರ ಮುಳ್ಳಾಗಿದೆ. ಆಕೆಗೆ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿರಬಹುದು. ಆದರೆ, ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಯುಯಿ ಸುಸಾಕಿಯನ್ನು ಮಣಿಸಿಫೈನಲ್ ತಲುಪುವ ಮೂಲಕವಿನೇಶ್ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ.

-ಎನ್.ಆರ್.ಚೇತನ್, ಮೈಸೂರು.

Tags:
error: Content is protected !!