ಕೊಡಗು : ಮಡಿಕೇರಿ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕೆಎಸ್ಆರ್ಟಿಸಿ ಬಸ್ವೊಂದು ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸೇನಾನಿ ತಿಮ್ಮಯ್ಯ ಪ್ರತಿಮೆ ನೆಲಕ್ಕುರುಳಿ ಬಿದ್ದಿದೆ.
ಮಡಿಕೇರಿ ಡಿಪೊದಿಂದ ಬಸ್ ಸ್ಟ್ಯಾಂಡ್ ಗೆ ಹೊರಟ್ಟಿದ್ದ ಬಸ್ ಪಿಕಪ್ ವಾಹನ ಅಪಘಾತ ತಪ್ಪಿಸಲು ಹೋಗಿ ತಿಮ್ಮಯ್ಯ ಮೂರ್ತಿಗೆ ಗುದ್ದಿದೆ. ಘಟನೆಯಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿದ್ದು, ಬಸ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಸ್ ಚಾಲಕ ಕೊಟ್ರೇಶ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.





