ಓದುಗರ ಪತ್ರ..
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ನರ ಹತ್ಯಾಕಾಂಡ ಧರ್ಮದ ಹೆಸರಿನಲ್ಲಿ ನಡೆದ ಭೀಕರ ಕೃತ್ಯ. ಇಂತಹ ಧರ್ಮ ಆಧಾರಿತ ಕೃತ್ಯಗಳು ಭಾರತದ ನೆಲದಲ್ಲಿ ಹೊಸದೇನಲ್ಲ. ಆದರೆ ಇದು 21 ನೆಯ ಶತಮಾನದವರೆಗೂ ಸಾಗಿ ಬಂದಿರುವುದು ನಿಜಕ್ಕೂ ಅಮಾನವೀಯ.
ಕುವೆಂಪು ಅವರ ‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ, ವಿಜ್ಞಾನ ದೀವಿಗೆ ಹಿಡಿಯಬನ್ನಿ ‘ ಎಂಬ ಸಂದೇಶದಂತೆ ಮಾನವ ನಡೆದರೆ ದೇಶಕ್ಕೆ ಮತ್ತು ಮಾನವ ಕುಲಕ್ಕೆ ಒಂದು ಅರ್ಥ ಬರುತ್ತದೆ. ಇಲ್ಲವಾದರೆ ಮಾನವ ಮೃಗಗಳ ಮನಸ್ಥಿತಿಗಿಂತಲೂ ಕೀಳಾಗುತ್ತಾನೆ.
– ಅಭಿಷೇಕ್, ಶಂಕರಪುರ, ನಂಜನಗೂಡು.





