Mysore
26
broken clouds

Social Media

ಬುಧವಾರ, 15 ಏಪ್ರಿಲ 2026
Light
Dark

ಸಚ್ಚಿದಾನದ ಶ್ರೀಗಳ ನೇತೃತ್ವದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಯಜ್ಞ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ಕಾರ್ಯಕ್ರಮ ನಡೆಯಿತು.

ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬೆಳಿಗ್ಗೆ 10.50 ಗಂಟೆಯಿಂದ ಪ್ರಾರಂಭವಾಗಿ 12 ಗಂಟೆಯವರೆಗೆ ನಡೆಯಿತು. ಸಾವಿರಾರು ಮಂದಿ ಭಕ್ತರು
ಸಾಮೂಹಿಕವಾಗಿ ಹನುಮಾನ್‌ ಚಾಲೀಸಾ ಪಠಣ ಮಾಡಿದರು. ಎಲ್ಲೆಡೆ ಕೇಸರಿ ಧ್ವಜಗಳು ಹಾರಿದವು.

ಆರ್ಶೀವರ್ಚನ ನೀಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸುಂದರಕಾಂಡ ಅಧ್ಯಾಯದ ಕುರಿತು ತುಳಸಿದಾಸರು ೪೦ ಶ್ಲೋಕಗಳನ್ನು ರಚಿಸಿದ್ದು, ಅದರ ಪಾರಾಯಣದಿಂದ ಪುಣ್ಯ ಲಭಿಸುತ್ತದೆ. ಹನುಮನನ್ನು ಭಜಿಸದರೆ ಭಯ ದೂರವಾಗಿ ಶಕ್ತಿ ಸಿಗುತ್ತದೆ ಎಂದರು.

ಫೆಬ್ರವರಿ 15ರಂದು ಮಹಾ ಶಿವರಾತ್ರಿ ಜಾಗರಣೆಯೂ ಆಶ್ರಮದಲ್ಲಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಧಾರ್ಮಿಕ ಘಟನೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ಎಲ್ಲ ಭಕ್ತರಿಗೆ ಹನುಮ ರಕ್ಷೆಯನ್ನು ವಿತರಿಸಲಾಯಿತು.

 

 

Tags:
error: Content is protected !!