ಎರಡನೇ ದಿನವೂ ಅಧಿಕಾರಿಗಳಿಂದ ಮುಡಾ ದಾಖಲೆಗಳ ಪರಿಶೀಲನೆ
ಮೈಸೂರು: ನಿವೇಶನಗಳ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಽಸಿದಂತೆ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ೨ನೇ ದಿನವಾದ ಶನಿವಾರವೂ ದಾಳಿ ಮುಂದುವರಿಸಿದ್ದು, ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ದೊರೆತಿವೆ.
ಇಡಿ ಅಧಿಕಾರಿಗಳ ಮೊದಲ ದಿನದ ಡ್ರಿಲ್‌ಗೆ ಬೆಚ್ಚಿಬಿದ್ದ ಮುಡಾ ಅಧಿಕಾರಿಗಳು, ವೈಟ್ನರ್ ಹಚ್ಚದ ದಾಖಲೆಗಳನ್ನು ಶನಿವಾರ ತಂದೊಪ್ಪಿಸಿ ದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ
ಸಾಧ್ಯತೆ ಇದೆ.
ಶುಕ್ರವಾರ ಬೆಳಿಗ್ಗೆ ೧೧ ಗಂಟೆಯಿಂದ ಸತತ ೧೨ ಗಂಟೆಗಳ ಕಾಲ ಸಾಕಷ್ಟು ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು, ರಾತ್ರಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಿಗ್ಗೆ ಮತ್ತೆ ಸಿಆರ್ ಪಿಎಫ್- ಯೋಧರ ಭದ್ರತೆಯೊಂದಿಗೆ ಆಯುಕ್ತರ ಕೊಠಡಿಯಲ್ಲಿ ೧೨ ಅಧಿಕಾರಿಗಳ ತಂಡ ಮತ್ತೆ ವಿಚಾರಣೆ ಮುಂದುವರಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು ಸಿಎಂ ಪತ್ನಿ ಪಾರ್ವತಿಗೆ ಸಂಬಂಧಿಸಿದ ೫೦:೫೦ ಅನುಪಾತದಡಿ ಮಂಜೂರಾಗಿರುವ ೧೪ ನಿವೇಶನಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಕೆಸರೆ ಗ್ರಾಮದ ಸರ್ವೆ ನಂಬರ್ ೪೬೪ರ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದ ತನಿಖಾಧಿಕಾರಿಗಳು ತಹಸಿಲ್ದಾರ್, ವಲಯ ಆಯುಕ್ತರು, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದರು.
ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಜತೆಗೆ ಒಬ್ಬರಿಗೊಬ್ಬರು ಮರು ಪ್ರಶ್ನೆಗಳನ್ನೂ ಹಾಕಿ ಸತ್ಯಾಂಶ ಹೊರ ತೆಗೆಯುವಲ್ಲಿ ಸ-ಲರಾಗಿದ್ದಾರೆ. ಕೇಂದ್ರೀಯ ಅರೆಸೇನಾಪಡೆ ಭದ್ರತೆಯಲ್ಲಿ ದಾಖಲೆಗಳನ್ನು ಆರು ಮಂದಿ ತಂಡ ಪರಿಶೀಲಿಸಿತು.
ಬೆಂಗಳೂರಿನಿಂದ ಕರೆಯಿಸಿದ್ದ ಇಬ್ಬರು ಎ-ಎಸ್‌ಎಲ್ ಅಧಿಕಾರಿಗಳ ಕೈಗೆ ಮೂಲ ದಾಖಲೆ ಒದಗಿಸಿ ವರದಿ ನೀಡುವಂತೆ ಕೇಳಲಾ
ಗಿದೆ. ಮನವಿ ಪತ್ರದ ೨ನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಚ್ಚಿದ್ದ ವಿಚಾರವೇ ಈಗ ಇಡಿಗೆ
ಸಿಕ್ಕಿದ ಪ್ರಮುಖ ಸಾಕ್ಷ್ಯವಾಗಿದೆ.
ಮೂಲ ದಾಖಲೆ ಪತ್ತೆ
ಮುಡಾ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪತ್ನಿ ನೀಡಿದ್ದ ಮನವಿ ಪತ್ರಕ್ಕೆ ವೈಟ್ನರ್ ಹಚ್ಚಿರುವುದು ಪತ್ತೆಯಾಗಿದೆ. ಮನವಿ ಪತ್ರದ ೨ನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಚ್ಚಲಾಗಿತ್ತು. ಆದರೆ, ಇದರ ಮಧ್ಯೆಯೇ ವೈಟ್ನರ್ ಹಚ್ಚಿರುವ ಪತ್ರ ಕೂಡ
ಇಡಿ ಅಧಿಕಾರಿಗಳಿಗೆ ಸಿಕ್ಕಿದೆ. ವೈಟ್ನರ್ ಹಚ್ಚಿದ ದಾಖಲೆಯೇ ಸಿದ್ದರಾಮಯ್ಯಗೆ ಸಂಕಷ್ಟ ತರಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.
ಸಿಎಂ ಬಿಡುಗಡೆ ಮಾಡಿರುವ ದಾಖಲೆ ಹಾಗೂ ಆರ್‌ಟಿಐನಲ್ಲಿ ನೀಡಿದ್ದ ದಾಖಲೆ ಬೇರೆ ಬೇರೆ ಇದೆ. ವೈಟ್ನರ್‌ನಲ್ಲೂ ವ್ಯತ್ಯಾಸ ಕಂಡು ಬಂದಿದೆ. ಇದಿಷ್ಟೇ ಅಲ್ಲ,ಎರಡೂ ದಾಖಲೆಗಳಲ್ಲಿ ಸಿಎಂ ಪತ್ನಿಯ ಸಹಿಯಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ.