Mysore
26
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ವಿಶೇಷ ವಿನ್ಯಾಸದ ಸ್ಟಾರ್‌ ಬಾಯ್‌ 6

ಉತ್ತಮ ವಿನ್ಯಾಸದ ಇಯರ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ನು-ರಿಪಬ್ಲಿಕ್ ಇತ್ತೀಚೆಗೆ ಸ್ಟಾರ್‌ಬಾಯ್ ೬ ವೈರ್‌ಲೆಸ್ ಹೆಡ್‌ಫೋನ್ ಬಿಡುಗಡೆ ಮಾಡಿದೆ.

ಈ ಹೆಡ್‌ಫೋನ್ ಉತ್ತಮ ಧ್ವನಿ ಹೊರಹೊಮ್ಮಿಸುವ ಸಾಮರ್ಥ್ಯ ಹೊಂದಿದ್ದು ಗೇಮಿಂಗ್ ಪ್ರಿಯರಿಗೂ, ಸಂಗೀತ ಪ್ರಿಯರಿಗೂ ಅನುಕೂಲಕರವಾಗಿದೆ.

ಸ್ಟಾರ್‌ಬಾಯ್ ೬ ವೈರ್‌ಲೆಸ್ ಹೆಡ್ ಫೋನ್‌ನ ವಿನ್ಯಾಸ ಆಕರ್ಷಕವಾಗಿದ್ದು, ಇದರಲ್ಲಿ ಬೇಕಾದಾಗ ಹೊರಗೆಳೆದು ನಂತರ ಮಡಚಬಲ್ಲ ಮೈಕ್ ಪೀಸ್ ಮತ್ತು ಎಲ್‌ಇಡಿ ದೀಪದ ವಿನ್ಯಾಸವನ್ನು ಅಳವಡಿಸಲಾಗಿದೆ. ಈ ಹೆಡ್‌ಫೋನ್ ಹಗುರವಾಗಿದ್ದು, ಫೋನ್ ಕರೆಗಳು, ವಿಡಿಯೋ ಮೀಟಿಂಗ್‌ಗಳ ಸಂದರ್ಭದಲ್ಲಿ ಸ್ಪಷ್ಟವಾದ ಮಾತು ಕೇಳುತ್ತದೆ. ಇನ್ನು ಇದರಲ್ಲಿ ಎಕ್ಸ್-ಬೇಸ್ ತಂತ್ರಜ್ಞಾನದ ಮೂಲಕವಾಗಿ ೩ಡಿ ಎಫೆಕ್ಟ್ ಇರುವ ನಾದವನ್ನು ಹೆಚ್ಚು ಬೇಸ್ ಧ್ವನಿಯ ಮೂಲಕ ಆನಂದಿಸಬಹುದು. ಅಲ್ಲದೆ ಇದರಲ್ಲಿ ಮ್ಯೂಸಿಕ್ ಮತ್ತು ಗೇಮಿಂಗ್‌ಗಾಗಿ ಪ್ರತ್ಯೇಕವಾದ ಮೋಡ್ ಗಳಿವೆ.

ಸುತ್ತಮುತ್ತಲಿನ ಧ್ವನಿಯು ಕಿವಿಗೆ ಕೇಳಿಸದಂತೆ ಇಯರ್‌ಕಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಹೆಡ್ ಫೋನ್ ಉತ್ತಮ ಬ್ಯಾಟರಿ ಮತ್ತು ಸಂಪರ್ಕ ವಿನ್ಯಾಸ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ (ಶೂನ್ಯದಿಂದ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತದೆ. ) ನಿರಂತರವಾಗಿ ಸುಮಾರು ೩೦ ಗಂಟೆಗಳ ಕಾಲ ಬಳಸಬಹುದಾಗಿದೆ. ಬ್ಲೂಟೂತ್ ನೆರವಿನಿಂದ ಎರಡು ಸಾಧನಗಳನ್ನು ಏಕಕಾಲಕ್ಕೆ ಪೇರಿಂಗ್ ಮಾಡುವ ಮೂಲಕ ಈ ಹೆಡ್‌ಫೋನ್‌ಗೆ ಸಂಪರ್ಕಿಸಬಹುದಾಗಿದೆ.

ಇದರ ಈಗಿನ ಬೆಲೆ ೨,೪೯೯ ರೂ. ಗಳಾಗಿದ್ದು, ಪ್ರಮುಖ ಆನ್‌ಲೈನ್ ವಾಣಿಜ್ಯ ತಾಣಗಳಲ್ಲಿ ಲಭ್ಯವಿದೆ.

 

Tags: