ವಿಶೇಷವಾಗಿ ಮಹಿಳೆಯರಿಗಾಗಿಯೇ ನು ರಿಪಬ್ಲಿಕ್ ಕಂಪೆನಿಯು ಅತ್ಯುತ್ತಮ ಆಡಿಯೋ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಗರ್ಲ್ ಪಿಡಬ್ಲ್ಯುಆರ್‌ವೈರ್ ಲೆಸ್ ಇಯರ್ ಬಡ್ ಮತ್ತು ಪವರ್ ಬ್ಯಾಂಕ್’ ಅನ್ನು ಬಿಡುಗಡೆ ಮಾಡಿದೆ.
ವಿಶೇಷವಾಗಿ ಮಹಿಳಾ ಗ್ರಾಹಕರನ್ನೇ ಗುರಿಯಾಗಿಸಿ ಕೊಂಡು ಮತ್ತು ತಿಳಿ ಹಸಿರು ಬಣ್ಣದ ಗರ್ಲ್ ಪಿಡಬ್ಲ್ಯುಆರ್ ಆವೃತ್ತಿಯ ವೈರ್‌ಲೆಸ್ ಇಯರ್‌ಬಡ್ ಮತ್ತು ಪವರ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳಲ್ಲಿ ನಾಯ್ಡ್ ಕ್ಯಾನ್ಸಲೇಶನ್, ಉತ್ತಮ ಆಡಿಯೊ, ನಯವಾದ ವಿನ್ಯಾಸ ಹೊಂದಿರುವ ಈ ಇಯರ್‌ಬಡ್ಸ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 48 ಗಂಟೆಗಳ ಕಾಲ
ಬಳಸಬಹುದು.
ಮಹಿಳೆಯರು ಗೇಮ್ಸ್ ಆಡಲು, ವರ್ಕೌಟ್ ಮಾಡುವಾಗ, ರನ್ನಿಂಗ್ ಮಾಡುವಾಗ ಹಾಗೂ ಇತರೆ ದೈನಂದಿನ ಕೆಲಸದ ವೇಳೆಯಲ್ಲಿ ಈ ಇಯರ್ ಬಡ್ಸ್ ಅನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದ್ದು, ಈ ಇಯರ್ ಬಡ್ ಬಡ್ ನು ರಿಪಬ್ಲಿಕ್ ವೆಬ್‌ಸೈಟ್‌ನಲ್ಲಿ ಮತ್ತು ಸ್ವಿಗ್ಗಿ ಇನ್ ನಲ್ಲಿ ಲಭ್ಯವಿದೆ. ಇದರ ಬೆಲೆ ರೂ. 799 ನಿಗದಿ
ಮಾಡಲಾಗಿದೆ. ಎಕ್1 5000ಎಂಎಎಚ್ ಸಾಮರ್ಥ್ಯದ ಗರ್ಲ್ ಪಿಡಬ್ಲ್ಯುಆರ್ ವೈರ್‌ಸ್ ಆವೃತ್ತಿಯ ಪವರ್ ಬ್ಯಾಂಕ್ 1,799ರಂತೆ ದೊರೆಯುತ್ತದೆ. ವಿಶೇಷವೆಂದರೆ ಪಿಡಬ್ಲ್ಯುಆರ್ ವೈರ್‌ಸ್ ಆವೃತ್ತಿಯ ಇಯರ್ ಬಡ್ಸ್ ಮತ್ತು ಪವರ್ ಬ್ಯಾಂಕ್‌ಗಳು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌ನಲ್ಲಿ ಆರ್ಡರ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ.