ಮುಂಬೈ: ಭಾರತದ ದೂರ ಸಂಪರ್ಕ (ಟೆಲಿಕಾಂ) ಕ್ಷೇತ್ರದ ದೈತ್ಯ ಜಿಯೋ ಕಂಪನಿ ಹೊಸ ವರ್ಷಕ್ಕೆ ಹೊಸ ಪ್ರಿಪೇಯ್ಡ್ ಯೋಜನೆ ಜಾರಿ ಮಾಡುವ ಮೂಲಕ ಬಳಕೆದಾದರಿಗೆ ಬಂಪರ್ ಉಡುಗೊರೆ ನೀಡಿದೆ.
ತನ್ನ ಬಳಕೆದಾರರನ್ನು ಹೆಚ್ಚಿಸುವ ಜೊತೆಗೆ ಈಗಿರುವ ಬಳಕೆದಾರರಿಗೆ ಕಂಪನಿ ಹೊಸ ಆಫರ್ ನೀಡಿದೆ. ಈ ಯೋಜನೆಯಲ್ಲಿ ಜಿಯೋ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಎಸ್‌ಎಂಎಸ್ ಸೇವೆ ಪಡೆಯಬಹುದು.
ಜಿಯೋ ಎಂದಿನಂತೆ ಈ ಬಾರಿಯು ವರ್ಷದ ಅಂತ್ಯದಲ್ಲಿ ಹೊಸ ಆಫರ್ ಬಿಡುಗಡೆ ಮಾಡಿದೆ. ತಮ್ಮ ಚಂದದಾರರಿಗೆ 2,150ರವರೆಗೆ ಈ ಯೋಜನೆಯಲ್ಲಿ ಪ್ರಯೋಜನ ನೀಡಲಾಗಿದ್ದು, ಶಾಪಿಂಗ್ ಸೈಟ್ ರಿಯಾಯಿತಿ, ಆಹಾರ ವಿತರಣಾ ಅಪ್ಲಿಕೇಶನ್‌ಗಳು ಹಾಗೂ ಫ್ಲೈಟ್ ಬುಕಿಂಗ್‌ಗಳಿಗೂ ಪ್ರವೇಶ ನೀಡಿದೆ.
ಗ್ರಾಹಕರು ಜನವರಿ 11, 2025 ರೊಳಗೆ ಈ ಯೋಜನೆ ಖರೀದಿಸಿದರೆ ಮಾತ್ರ ಇದರ ಪ್ರಯೋಜನ ಪಡೆಯಬಹುದಾಗಿದೆ. ಇದರ ವ್ಯಾಲಿಡಿಟಿ 200 ದಿನಗಳವರೆಗೆ ಮಾತ್ರ ನೀಡಲಾಗಿದೆ.
ಈ ಯೋಜನೆ ಬಳಸುವ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು SMS ಸೌಲಭ್ಯ ನೀಡಿದ್ದು, ಜೊತೆಗೆ 5G ಡೇಟಾ ಬೆಂಬಲವನ್ನು ನೀಡಲಾಗುತ್ತದೆ. ಅಲ್ಲದೇ, 500GB 4G ಡೇಟಾ ಅಥವಾ 2.5GB ದೈನಂದಿನ 4G ಡೇಟಾ ಸೌಲಭ್ಯ ನೀಡಲಾಗಿದೆ.
ಬಳಕೆದಾರರು ಕನಿಷ್ಠ 2500 ರೂ. ಗಳವರೆಗೆ ಹಣ ನೀಡಿ ಈ ಯೋಜನೆ ಖರೀದಿ ಮಾಡಿದರೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಚಂದದಾರಿಕೆ ಪಡೆಯಬಹುದು. ಜೊತೆಗೆ 500 ರೂಪಾಯಿ ಮೌಲ್ಯದ Ajio ದ ಕೂಪನ್ ಕೂಡ ಇದೆ. ಬಳಕೆದಾರರು ಲಿಂಕ್ ಮೂಲಕ ಶಾಪಿಂಗ್ ಮಾಡಬಹುದು.
ಇನ್ನು ಸ್ವಿಗ್ಗಿಯಿಂದ ಆರ್ಡರ್ ಮಾಡಿದರೆ 150ರೂಪಾಯಿ ರಿಯಾಯಿತಿ ಸಿಗುತ್ತದೆ. ಆದರೆ ಅದಕ್ಕಾಗಿ ಕನಿಷ್ಠ 499 ರೂಪಾಯಿ ಆರ್ಡರ್ ಮಾಡಬೇಕು. EaseMyTrip ಮುಖಾಂತರ ನೀವು ಫ್ಲೈಟ್ ಟಿಕೆಟ್ ಬುಕ್ ಮಾಡಿದರೆ 1,500 ರೂ.ಗಳ ರಿಯಾಯಿತಿ ಪಡೆಯಬಹುದು ಎಂದು ಜಿಯೋ ಕಂಪನಿ ತಿಳಿಸಿದೆ.