ಮಹಿಳೆಯರ ಮಟ್ಟಿಗೆ ಮಾನವ ಘನತೆಯನ್ನು ಕಾಪಾಡುವ ಭರವ–ಸೆಯು ಇನ್ನೂ ಪೊಳ್ಳಾಗಿಯೇ ಉಳಿ–ದಿದೆ. ಬ್ರಾಡ್ವೆಲ್ ವರ್ಸಸ್ ಇಲಿನಾಯಿಸ್ ಸರ್ಕಾರ (೧೮೭೨)ದ ಪ್ರಕರಣ–ವೊಂದ–ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ‘ಭಗವಂ–ತನು ಲಿಂಗತ್ವವನ್ನು ಚಟು–ವಟಿಕೆಗಳ ವಿಭಿನ್ನ ಸ್ತರಗಳಲ್ಲಿ ಬಳಸುವ ಸಲುವಾಗಿಯೇ ಸೃಷ್ಟಿಸಿರುತ್ತಾನೆ, ಹಾಗಾಗಿ ಕಾನೂನು ರೂಪಿಸಿ, ಅನ್ವಯಿಸಿ …