Mysore
21
overcast clouds
Light
Dark

hadu padu

Homehadu padu

• ಸಿರಿ ಮೈಸೂರು ಅದೊಂದು ಮಾಮೂಲಿ ಮಧ್ಯಾಹ್ನ. ಆ ದಿನ ನಾನು ಮೇಲುಕೋಟೆಯಲ್ಲಿದ್ದೆ. ಚೆಂದದ ದೇವಸ್ಥಾನ ಹಾಗೂ ರಾಯಗೋಪುರ, ಆದರದಿಂದ ಮಾತನಾಡುವ ಜನರು, ಎಲ್ಲಕ್ಕೂ ಮಿಗಿಲಾಗಿ ಮಂಡ್ಯ ನನ್ನ ತಂದೆಯ ಊರು. ಈ ಕಾರಣಗಳಿಗಾಗಿ ಮೇಲುಕೋಟೆಗೆ ಆಗಿಂದಾಗ್ಗೆ ಹೋಗಿ ಬರುವ ಅಭ್ಯಾಸ. …

“ನನ್ನ ಗಂಡುನ್ನಾ ಸೆರ್ಗೊಳಿಕಾಕ್ಕೊಂಡು ಗುಮ್ಮುನ್ ಗುಸ್ತುನಂಗೆ ಕದ ವಳ್ಕೊಂಡು ಕೂತಿದ್ದಿಯೇನೆ ನನ್ನ ಸೌತಿ, ಧೈರ್ಯ ಇದ್ರೆ ಈಚಿಕ್ ಬಂದು ಜವಾಬ್ ಕೊಟ್ ಹೋಗ್ಗೆ” ಎಂದು ಶ್ಯಾಮಿ ಮನೆಯ ಬೀದಿ ಬಾಗಿಲಲ್ಲಿ ನಿಂತು ಅರಚಾಡುತ್ತಿದ್ದಳು ಚಂದ್ರಿ. ತನ್ನ ಪ್ರೀತಿಯ ಹೆಂಡತಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ …

ಅಜಯ್ ಕುಮಾರ್ ಎಂ ಗುಂಬಳ್ಳಿ ಕೆರೆ ಕೆಲಸಕ್ಕೆ ಹೋಗಿದ್ದ ಪುಟ್ಟಮ್ಮಜ್ಜಿ ಬರುವಾಗ ಅವಳ ಮಡಿಲು ವಾಲಿಬಾಲ್ ಚೆಂಡಿನಾಕಾರದಲ್ಲಿ ಕಾಣುತ್ತಿದ್ದಕ್ಕೆ ಹಟ್ಟಿ ಮುಂದೆ ಕೂತಿದ್ದ ನಾನು “ಏನಜ್ಜಿ ಅದು" ಅಂದೆ. ನಗಾಡುತ್ತ ಪುಟ್ಟಮ್ಮಜ್ಜಿ “ಬೆರಕೆಸೊಪ್ಪು ಕನ ಬುಡು ನನ್ ಕಂದ. ಕಾಡಿನಿಂದ ಇನ್ಯಾನ್ …

ಹನಿ ಉತ್ತಪ್ಪ ಮೈಸೂರಿನ ಅಮೀರ್ ಅವರು ಕಂಪ್ಯೂಟರ್ ಸೈನ್ಸ್ ಪದವೀಧರರು. ಸಾಫ್ಟ್‌ವೇರ್ ಉದ್ಯಮ ಸಾಕು-ಬೇಕಾದ ಮೇಲೆ ಗುಜರಿ ವ್ಯಾಪಾರವನ್ನು ಆರಂಭಿಸಿದವರು. ಅಮೀರ್ ಅವರು ತನ್ನ ಮಕ್ಕಳಿಬ್ಬರ ಕನಸುಗಳಿಗೆ ರೆಕ್ಕೆಕಟ್ಟುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅಯಾನ್ ಮತ್ತು ಅಫ್ಜಾಳ ತಂದೆಯೆಂಬ ಹೆಮ್ಮೆ ಭಾವ. …

ರಂಗಸ್ವಾಮಿ ಸಂತೇಬಾಚಹಳ್ಳಿ ಪ್ರಕೃತಿಯ ಸಹಜ ಸೌಂದರ್ಯವನ್ನು ಸವಿಯುವ ಕನಸು ಯಾರಿಗಿಲ್ಲ ಹೇಳಿ! ಇಂತಹ ನಿಸರ್ಗ ಸೃಷ್ಟಿ ಯನ್ನು ಬೆರಗುಗೊಳಿಸುವ ತಾಣವೊಂದು ಕೃಷ್ಣರಾಜ ಪೇಟೆಯಿಂದ ಮೇಲುಕೋಟೆಗೆ ಹೋಗುವ ದಾರಿಯಲ್ಲಿದೆ. ಅದೇ ದಾರಿಯ ಉತ್ತರಕ್ಕೆ ಕಾಣಬರುವ ಈ ಸುಂದರ ಬೆಟ್ಟಗಳ ಸಾಲಿನಲ್ಲಿ ಎತ್ತರವಾಗಿ ನಿಂತಿರುವ …

• ಹನಿ ಉತ್ತಪ್ಪ ಕಲೆಯನ್ನು ನಂಬಿದರೆ ಕೈ ಹಿಡಿಯುತ್ತದೆ ಎಂಬುದಕ್ಕೆ ಕಲೆಯನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಮೈಸೂರಿನ ಸಯ್ಯದ್ ಮೌಲಾ ಅವರ ಬದುಕೇ ಸಾಕ್ಷಿ. ಬಿದಿರು ಪಿಟೀಲು ನುಡಿಸುವ, ಜನರನ್ನು ಸೆಳೆಯಬಲ್ಲ ಮ್ಯಾಜಿಕ್ ವಿದ್ಯೆಗಳೆಲ್ಲದರ ಮಧ್ಯೆ, ಸರಳತೆ ಮತ್ತು ನಗು ಇವರ ಜೊತೆಗಾರರು. …

• ಸ್ವಾಮಿ ಪೊನ್ನಾಚಿ ಅವಳು ಎಲ್ಲಾದರೂ ಓಡಿ ಹೋಗೋಣ ಬಾ ಎಂದು ಕರೆದಾಗ ನನಗೆ ನಗು ಬಂದಿತ್ತೇ ವಿನಾ ಇದು ಇಷ್ಟೊಂದು ಸೀರಿಯಸ್ ಕೇಸ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಪಕ್ಕದ ಮನೆಯ ಅಂಕಲ್‌ಗೆ ಅದಾಗ ತಾನೆ ಮದುವೆಯಾಗಿ ಮದುಮಗಳ ಜೊತೆಗಿರಲು ಅವಳ …

ದಿವಾಕ‌ರ್ ಅವರ ಒಡನಾಟದಿಂದ ನನಗೆ ವಿಶ್ವ ಸಾಹಿತ್ಯದ ಬಾಗಿಲುಗಳು ತೆರೆದವು. ನೊಬೆಲ್ ಪ್ರಶಸ್ತಿ ಪಡೆದ ಐವತ್ತು ಲೇಖಕರ ಒಂದೊಂದು ಕಥೆಯನ್ನು ಆಯ್ದು ಅನುವಾದಿಸಿ ಒಂದು ಸಂಕಲನವಾಗಿ ಪ್ರಕಟಿಸುವುದು ಸರಳವಾದ ಮಾತೇನೂ ಅಲ್ಲ. ಹೀಗೇ 'ಕಥಾಜಗತ್ತು' ಎನ್ನುವ ಮಹತ್ವದ ಪುಸ್ತಕವನ್ನು ದಿವಾಕರ್ ರೂಪಿಸಿದ್ದರು. …

-ಸದಾನಂದ ಆರ್ ‘‘ಬರದ ಛಾಯೆಯ ನಡುವೆ ೨೦೨೩ರ ದಸರಾ ಅಂತ್ಯ’’ ಅನ್ನೋ ಸುದ್ದಿ ಓದುತ್ತಿದ್ದವನನ್ನು ‘‘ಓ.....ದಸರಾದಲ್ಲಿ ರಾವಣಾಸುರನನ್ನೂ ಸುಡುತ್ತಾರೆ. ದೆಹಲಿ ಎಷ್ಟು ದೊಡ್ಡ ಬೊಂಬೆ ನಿರ್ಮಿಸಿದ್ದಾರೆ ನೋಡಿಲ್ಲ’’ ಕರೆದು ಇಂಗ್ಲಿಷ್ ಪತ್ರಿಕೆಯಲ್ಲಿದ್ದ ಚಿತ್ರವನ್ನು ತೋರಿಸಿದಳು ಮಗಳು. ‘‘ಹೌದು. ದಸರಾದಲ್ಲಿ ರಾವಣಾಸುರನ ದಹನ …

ಡಾ.ಶೋಭಾ ರಾಣಿ ತಾತ್ಕಾಲಿಕ ಖಿನ್ನತೆ ಅನ್ನುವುದೊಂದಿದೆ, ಮುಗಿದ ಜಾತ್ರೆಯ ಸಂಭ್ರಮ, ಹಬ್ಬ ಮುಗಿಸಿ ನೆಂಟರು ಹೊರಾಟಾಗ, ತುಂಬಿ ತುಳುಕುತ್ತಿದ್ದ ರಸ್ತೆ, ಬೀದಿಗಳು ದಿಢೀರ್ ಎಂದು ಖಾಲಿಯಾದಾಗ ಈ ತಾತ್ಕಾಲಿಕ ಖಿನ್ನತೆಯೊಂದು ಮೆಲ್ಲನೆ ನುಸುಳಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಂತಹ ತಾತ್ಕಾಲಿಕ ಖಿನ್ನತೆ ನಮ್ಮ …