ಬೆಂಗಳೂರು: ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಹುದ್ದೆ ಭರ್ತಿ ಮಾಡುವುದು ಯಾವಾಗ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಮಾಡಿದೆ.
ಶಿಕ್ಷಣ ಇಲಾಖೆಯಲ್ಲಿ 80 ಸಾವಿರ ಹುದ್ದೆ ಖಾಲಿ, ಆರೋಗ್ಯ ಇಲಾಖೆಯಲ್ಲಿ 37 ಸಾವಿರ ಹುದ್ದೆ ಖಾಲಿ, ಕಂದಾಯ ಇಲಾಖೆಯಲ್ಲಿ 10 ಸಾವಿರ ಹುದ್ದೆ ಖಾಲಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10 ಸಾವಿರ ಹುದ್ದೆ ಖಾಲಿ, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯಲ್ಲಿ 10 ಸಾವಿರ ಹುದ್ದೆ ಖಾಲಿಯಾಗಿವೆ.
ಇದನ್ನು ಓದಿ: ನಾಳೆಯಿಂದ 2 ದಿನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಪ್ರವಾಸ
ಇವುಗಳನ್ನು ಭರ್ತಿ ಮಾಡುವುದು ಯಾವಾಗ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಮಾಡಿದೆ.
ರಾಜ್ಯದಲ್ಲಿರುವುದು ವಚನಭ್ರಷ್ಟ ಸರ್ಕಾರ ಎಂಬುದು ಮತ್ತೊಮ್ಮೆ ಬಯಲಾಗಿದೆ. ಸರ್ಕಾರಿ ಕೆಲಸ ಕೇಳಿದ ಉದ್ಯೋಗಾಕಾಂಕ್ಷಿಗಳಿಗೆ ಸುಳ್ಳು ಬುರುಕ ಸಿದ್ದರಾಮಯ್ಯನವರ ಸರ್ಕಾರ ಕೊಟ್ಟಿದ್ದು ಬರೀ ಲಾಠಿ ಏಟು ಮಾತ್ರ. ಸಿದ್ದರಾಮಯ್ಯನವರೇ ಖಾಲಿಯಿರುವ 2.5 ಲಕ್ಷ ಹುದ್ದೆ ಭರ್ತಿ ಮಾಡುವುದು ಯಾವಾಗ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.





