Mysore
20
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಯುಗಾದಿ ಸಂಭ್ರಮ : ಮೈಸೂರಲ್ಲಿ ಖರೀದಿ ಜೋರು

ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನಗರದಾದ್ಯಂತ ಮನೆಗಳು, ದೇವಸ್ಥಾನಗಳಲ್ಲಿ ಬೇವು-ಬೆಲ್ಲದ ತಯಾರಿಕೆ, ವಿಶೇಷ ಪೂಜೆಗಳಿಗೆ ಭರದ ಸಿದ್ಧತೆಗಳು ನಡೆದಿವೆ.

ಅರಮನೆ ಆವರಣದಲ್ಲಿ ಮಾರ್ಚ್ 19 ರಿಂದ 2-3 ದಿನಗಳ ಕಾಲ ‘ಯುಗಾದಿ ಸಂಗೀತೋತ್ಸವ’ ಆಯೋಜಿಸಲಾಗಿದೆ.

ದೇವರಾಜ ಮಾರುಕಟ್ಟೆ ಸೇರಿ ವಿವಿಧೆಡೆ ಯುಗಾದಿ ಹಬ್ಬದ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಮಾವು-ಬೇವಿನ ಸೊಪ್ಪು, ಹೂ, ಹಣ್ಣು ಸೇರಿದಂತೆ ಹಬ್ಬದ ಪರಿಕರಗಳ ಖರೀದಿ ಭರಾಟೆ ಜೋರಾಗಿದೆ. ಇನ್ನ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ವಸ್ತುಗಳ ಖರೀದಿಗೆ ಮೈಸೂರಿಗರು ಮುಗಿಬಿದ್ದಿದ್ದಾರೆ.

ಹೊಸಬಟ್ಟೆ ಖರೀದಿಗೆ ರಷ್…
ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬವೇ ವರ್ಷದ ಮೊದಲ ಹಬ್ಬ. ಹೀಗಾಗಿ ಹೊಸ ಬಟ್ಟೆ ಖರೀದಿಗೆ ಜನರು ಮುಗಿಬಿದ್ರು. ಮಹಿಳೆಯರು ಸೀರೆ, ಬಳೆ, ಚೂಡಿದಾರ್, ಲೆಹಂಗಾ ಖರೀದಿಸಿದ್ರೆ, ಪುರುಷರು ಜೀನ್ಸ್ ಪ್ಯಾಂಟ್, ಪಂಚೆ, ಶರ್ಟ್ ಗಳನ್ನ ಕೊಂಡುಕೊಂಡರು. ಜನರ ದಟ್ಟಣೆ ಹೆಚ್ಚಾದ ಪರಿಣಾಮ ದೇವರಾಜ ಮಾರ್ಕೆಟ್, ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯಲ್ಲಿ ಸವಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

 

Tags:
error: Content is protected !!