Mysore
24
moderate rain

Social Media

ಭಾನುವಾರ, 24 ಮೇ 2026
Light
Dark

ಹೊಸ ಶಾಸಕರನ್ನು ಮಂತ್ರಿ ಮಾಡಿದ್ರೆ ತಪ್ಪೇನು?: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೆ ಅವಕಾಶ ನೀಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಶಾಸಕರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಹೊಸ ಶಾಸಕರನ್ನು ಮಂತ್ರಿ ಮಾಡಿದರೆ ತಪ್ಪೇನಿಲ್ಲ. ಹೊಸಬರನ್ನು ಮಂತ್ರಿ ಮಾಡಿ ಎನ್ನುವುದಕ್ಕೆ ನನ್ನ ಸಹಮತವಿದೆ. ಮೊದಲು ಗೊಂದಲ ಬಗೆಹರಿಸಿ ಎಂದು ಹೈಕಮಾಂಡ್‌ಗೆ ಹೇಳಿದ್ದೇವೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಸತೀಶ್‌ ಜಾರಕಿಹೊಳಿ ಅವರ ಅಹಿಂದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸತೀಶ್‌ ಜಾರಕಿಹೊಳಿ ಅವರು ಹಿಂದಿನಿಂದಲೂ ಅಹಿಂದ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ನಾವು ಅವರ ಅಹಿಂದ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Tags:
error: Content is protected !!