ಬೆಂಗಳೂರು: ಮದ್ಯ ಪ್ರಿಯರಿಗೆ ಅಬಕಾರಿ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಸದ್ಯಕ್ಕೆ ಬಿಯರ್ ಬೆಲೆ ಹೆಚ್ಚಳ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ದಿನಗಳಿಂದ ಬಿಯರ್ ಬೆಲೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಯರ್ ಬೆಲೆ ಶೀಘ್ರದಲ್ಲೇ ಪ್ರತಿ ಬಾಟಲಿಗೆ ಸುಮಾರು 10 ರಿಂದ 20 ರೂಪಾಯಿ ಹೆಚ್ಚಳವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಸದ್ಯಕ್ಕೆ ಬಿಯರ್ ದರ ಪರಿಷ್ಕರಣೆ ನಿರ್ಧಾರವನ್ನು ರಾಜ್ಯ ಸರ್ಕಾರ ಮುಂದೂಡಿಕೆ ಮಾಡಿದೆ.
ಬಿಯರ್ ದರ ಹೆಚ್ಚಳ ಮಾಡಿದರೆ ಆದಾಯಕ್ಕೆ ತೀವ್ರ ಪೆಟ್ಟು ಬೀಳಬಹುದು ಎಂಬ ಉದ್ದೇಶಕ್ಕಾಗಿ ದರ ಏರಿಸದೇ ಇರಲು ಸರ್ಕಾರ ನಿರ್ಧಾರ ಮಾಡಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ 2025ರ ಜನವರಿಯವರೆಗೂ ಬಿಯರ್ ದರ ಹೆಚ್ಚಳ ಮಾಡದೆ ಇರಲು ಅಬಕಾರಿ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.
ಇನ್ನು ಇಯರ್ ಎಂಡ್ ಪಾರ್ಟಿ ಹಾಗೂ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿಯೂ ಬಿಯರ್‌ಗೆ ಭಾರೀ ಬೇಡಿಕೆ ಬರುವ ಸಾಧ್ಯತೆಯಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.