ದಾವಣಗೆರೆ: ಮಳೆ ಜಾಸ್ತಿಯಾಗುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಶುರುವಾಗಿದ್ದು, ದಾವಣಗೆರೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮಗುವೊಂದು ಬಲಿಯಾಗಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚಿಕ್ಕೂಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಡೆಂಗ್ಯೂ ಜ್ವರಕ್ಕೆ 2 ವರ್ಷದ 11 ತಿಂಗಳ ಮಗು ಬಲಿಯಾಗಿದೆ.
ರಾಜಪ್ಪ ಹಾಗೂ ದಿವ್ಯ ದಂಪತಿಯ 2 ವರ್ಷದ ನಿರ್ವಾಣ ಎಂಬ ಮಗುವೇ ಡೆಂಗ್ಯೂ ಬಲಿಯಾಗಿರುವ ಪುಟ್ಟ ಕಂದಮ್ಮನಾಗಿದೆ.
ಕಳೆದ ಐದು ದಿನಗಳಿಂದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಇನ್ನು ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದಲೇ ಡೆಂಗ್ಯೂ ಬರಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.