Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ಬಿಜೆಪಿ – ಜೆಡಿಎಸ್ ಪ್ರತಿಭಟನೆಯ ನಡುವೆ ಮೂರು ವಿಧೇಯಕಗಳ ಮಂಡನೆ

ಬೆಂಗಳೂರು : ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಇಂದು ವಿಪಕ್ಷಗಳ ಪ್ರತಿಭಟನೆಯ ನಡುವೆ ಮೂರು ವಿಧೇಯಕಗಳನ್ನ ಮಂಡನೆ ಮಾಡಲಾಯಿತು.

ಅಧಿವೇಶನ ಆರಂಭವಾಗುತ್ತಿದ್ದಂತೆ ವಿಪಕ್ಷ ಬಿಜೆಪಿ ಜೆಡಿಎಸ್‌ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಳಿಕ ಸದನದಲ್ಲಿ ಗದ್ದಲ ಶುರುವಾಯಿತು. ಗದ್ದಲದ ನಡುವೆಯೇ ಸರ್ಕಾರ ಸದನದಲ್ಲಿ ಮೂರು ವಿಧೇಯಕಗಳನ್ನು ಮಂಡನೆ ಮಾಡಿತು.

೨೦೨೪ನೇ ಸಾಲಿನ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, ೨೦೨೪ನೇ ಸಾಲಿನ ವಿಧಾನಮಂಡಲ (ಅನರ್ಹತಾ ನಿವಾರಣಾ) ವಿಧೇಯಕ, ಕರ್ನಾಟಕ ಸಿನಿ & ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡನೆ ಮಾಡಲಾಯಿತು.

ವಿಧೇಯಕ ಮಂಡನೆ ವೇಳೆ ವಿಪಕ್ಷಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದವು. ಅಲ್ಲದೆ ಏನಿಲ್ಲ, ಏನಿಲ್ಲ ಸರ್ಕಾರ ಬಳಿ ಹಣವಿಲ್ಲ. ಶಾಸಕರಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂಬ ಹಾಡು ಹಾಡಿದರು.

Tags: