Mysore
21
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಈ ವರ್ಷವೂ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಯಿಲ್ಲ

ಚಾಮರಾಜನಗರ : ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಬ್ರೇಕ್ ಹಾಕಲಾಗಿದ್ದು ಬಂಡಿಪುರದಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಡಿ.31 ಮತ್ತು ಜ.1 ರಂದು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದ್ದು, ಜಂಗಲ್ ರೆಸಾರ್ಡ್, ಖಾಸಗಿ ರೆಸಾರ್ಟ್, ಹೋಂ ಸ್ಟೇಗಳಿಗೆ ಯಾವುದೇ ನಿರ್ಬಂಧವಿಲ್ಲ. ಜೊತೆಗೆ ಎಂದಿನಂತೆ ಸಫಾರಿ ವ್ಯವಸ್ಥೆ ಕೂಡ ಇರಲಿದೆ ಎಂದು ಬಂಡಿಪುರದ ಸಿಎಫ್ ಡಾ.ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಸಂಭ್ರಮಾಚರಣೆಯ ಹೆಸರಿನಲ್ಲಿ ವನ್ಯ ಜೀವಿಗಳಿಗೆ ತೊಂದರೆ ಹಿನ್ನಲೆ ಹೊ ವರ್ಷ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ. ವಾರಾಂತ್ಯದಲ್ಲಿ ಬಂಡಿಪುರದ ವಸತಿ ಗೃಹಗಳಿಗೆ ಬಹು ಬೇಡಿಕೆಯಿದ್ದು ಡಿ.31 ಮತ್ತು ಜ.1 ರಂದು ಎರಡು ದಿನಗಳ ಕಾಲ ಮಾತ್ರ ನಿಷೇಧಿಸಲಾಗಿದೆ.

ಮೋಜು,ಮಸ್ತಿ ಮಾಡಲು ಬರುವ ಪ್ರವಾಸಿಗರಿಗೆ ಸರ್ಕಾರಿ ವಸತಿ ಗೃಹಗಳಿಗೆ ಪ್ರವಾಸ ನಿಷೇಧಿಸಿದ್ದು, ಕೆಲವು ವರ್ಷಗಳಿಂದ ಹೊಸವರ್ಷದ ಸಂಭ್ರಮಾಚರಣೆಗೆ ಅರಣ್ಯ ಇಲಾಖೆ ಬ್ರೇಕ್‌ ಹಾಕಿದೆ..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!