Mysore
24
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಇದು ಕಾಂಗ್ರೆಸ್‌ ಪುಡಾರಿಗಳ ಕೆಲಸ, ತಲೆಕೆಡಿಸಿಕೊಳ್ಳಲ್ಲ : ಸಂಸದ ಪ್ರತಾಪ್‌ ಸಿಂಹ

ಮೈಸೂರು : ಆಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲನ ವಿಗ್ರಹಕ್ಕೆ ಬಳಸಲಾಗಿರುವ ಶಿಲೆ ಸಿಕ್ಕ ಸ್ಥಳದಲ್ಲಿ ಏರ್ಪಡಿಸಿದ್ದ ಪೂಜೆಯಲ್ಲಿ ಸಂಸದ ಪ್ರತಾಪ್‌ ಸಿಂಹಾ ಅವರಿಗೆ  ಘೇರಾವ್‌ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್‌ ಸಿಂಹ, ವಿಶ್ವವೇ ರಾಮ ಮಂದಿರ ಉದ್ಘಾಟನೆಯನ್ನು ಆಚರಣೆ ಮಾಡುತ್ತಿದೆ. ಇದೇ ವೇಳೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲ್ಲ ವಿಗ್ರ ಸಿಕ್ಕ ಜಮೀನಿನಲ್ಲಿ ಪೂಜೆ ಏರ್ಪಡಿಸಲಾಗಿತ್ತು.

ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್‌ ಪುಡಾರಿಗಳು ನನ್ನನ್ನು ದಲಿತ ವಿರೋಧಿ ಎಂದು ಕರೆದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕೊಡಲಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಮಹಿಷ ಭಕ್ತರನ್ನು ಎಂದಿಗೂ ನಾನು ಓಲೈಸುವುದಿಲ್ಲ. ಮಹಿಷನ ಭಕ್ತರು ನೂರು ಜನ ಇದ್ದರೆ, ತಾಯಿ ಚಾಮುಂಡಿಯ ಭಕ್ತರ ಸಂಖ್ಯೆ ಅಪಾರವಾಗಿದೆ. ಹೀಗಾಗಿ ಇಂಥವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!