ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆದಿಲ್ಲ. ಪ್ರತ್ಯೇಕವಾಗಿ ಜಾಸ್ತಿನೇ ಮಾತನಾಡಿರಬಹುದು. ಆದರೆ ಪಕ್ಷದಲ್ಲಿ ಅಂತಿಮ ತೀರ್ಮಾನವಾಗುತ್ತದೆ. ಡಿಕೆಶಿ ಬೆಂಬಲ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಕುರಿತು ಮಾತನಾಡಿದ ಅವರು, ಮದುವೆಗೆ ಬಂದಿದ್ದವು. ಈ ವೇಳೆ ನಾನು ಡಿಕೆಶಿ ಭೇಟಿ ಮಾಡಿದ್ದೆವು ಅಷ್ಟೇ ಎಂದರು.





