Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ವಿಧಾನಸೌಧದಲ್ಲೇ ಟೆರರಿಸ್ಟ್‌ಗಳಿದ್ದಾರೆ: ಕೇಂದ್ರ ಸಚಿವ ಎಚ್‌ಡಿಕೆ ಹೊಸ ಬಾಂಬ್‌

ಬೆಂಗಳೂರು: ವಿಧಾನಸೌಧದಲ್ಲಿಯೇ ಟೆರರಿಸ್ಟ್‌ಗಳಿದ್ದಾರೆ. ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟೆರರಿಸ್ಟ್‌ಗಳಿಗಿಂತಲೂ ಡೇಂಜರ್‌ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಧಾನಸೌಧದಲ್ಲಿಯೇ ಟೆರರಿಸ್ಟ್‌ಗಳಿದ್ದಾರೆ. ಆ ಟೆರರಿಸ್ಟ್‌ ಯಾರೆಂದು ನಮಗಿಂತ ಚೆನ್ನಾಗಿ ನಿಮಗೆಲ್ಲಾ ಗೊತ್ತು. ಜನರಿಗೂ ಕೂಡ ಗೊತ್ತು. ನಾವು ಜೈಲಿನಲ್ಲಿರುವ ಟೆರರಿಸ್ಟ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಧೀಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದರು.

ವಿಧಾನಸೌಧದಲ್ಲಿರುವ ಟೆರರಿಸ್ಟ್‌ಗಳು ಜೈಲಿನಲ್ಲಿರುವ ಟೆರರಿಸ್ಟ್‌ಳಿಗಿಂತಲೂ ಅಪಾಯಕಾರಿ ಎಂದು ಹೇಳಿದರು.

Tags:
error: Content is protected !!