Mysore
23
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕದ ಎರಡನೇ ಫೈನಲ್‌ ಪಟ್ಟಿ ಸೋರಿಕೆ!: ಮೈಸೂರಿನ ಇಬ್ಬರಿಗೆ ಸ್ಥಾನ?

ಬೆಂಗಳೂರು: ರಾಜ್ಯ ಸರ್ಕಾರ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ 36 ಕಾಂಗ್ರೆಸ್‌ ಶಾಸಕರನ್ನು ಮೊದಲ ಪಟ್ಟಿಯಲ್ಲಿ ನೇಮಿಸಿದ ಬೆನ್ನಲ್ಲೇ ಇದೀಗ 34 ಜನ ಕೈ ಕಾರ್ಯಕರ್ತರನು ಒಳಗೊಂಡ ಎರಡನೇ ಪಟ್ಟಿಯನ್ನು ಸಿದ್ದಪಡಿಸಿದ್ದು, ಒಂದೆರೆಡು ದಿನಗಳಲ್ಲಿ ಯಾವೆಲ್ಲಾ ಕೈ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಬಗ್ಗೆ ಅಧಸೂಚನೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹೈಕಮಾಂಡ್‌ ಒಪ್ಪಿಗೆ ನೀಡಿರುವ 34 ಕಾರ್ಯಕರ್ತರಲ್ಲಿ ಯಾರಿಗೆ ಯಾವ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲದರ ನೆಡುವೆ, ನಿಗಮ-ಮಂಡಳಿಗಳ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದೆ.

ಈ ಪ್ರಕಾರ ಕಾಂತಾ ನಾಯಕ್‌, ವಿನೋದ್‌ ಎಸ್‌ ಅಸೂಟಿ, ಮುಂಡರಗಿ ನಾಗರಾಜ್‌, ಡಾ. ಅಂಶುಮಂಥ್‌, ಬಿ.ಎಚ್‌. ಹರೀಶ, , ಜೆ.ಎಸ್‌. ಆಂಜನೇಯುಲು, ಡಾ. ಬಿ. ಯೋಗೇಶ ಬಾಬು, ಡಾ.ಎಚ್‌ ಕೃಷ್ಣ, ಮರಿಗೌಡ, ದೇವೀಂದ್ರಪ್ಪ ಮರ್ತೂರು, ರಾಜಶೇಖರ್‌ ರಾಮಸ್ವಾಮಿ, ಕೆ.ಮರೀಗೌಡ, ಜಯಣ್ಣ, ಎಸ್‌ ಮನೋಹರ್‌, ಅಯ್ಯೂಬ್‌ ಖಾನ್‌, ಮಮತಾ ಗುಟ್ಟಿ, ಜಿ. ಪಲ್ಲವಿ, ಎಸ್‌.ಇ ಸುಧೀಂದ್ರ, ಡಾ. ನಾಗಲಕ್ಷ್ಮೀ ಚೌಧರಿ, ಎಚ್‌.ಎಸ್‌. ಸುಂದರೇಶ್‌, ಆರ್‌.ಎಂ ಮಂಜುನಾಥ್‌ ಗೌಡ, ಜಯಣ್ಣ, ಸಂಪತ್‌ ರಾಜ್‌, ಸವಿತಾ ರಘು, ಪದ್ಮಾವತಿ, ಶಾಕಿರ್‌ ಸನದಿ, ಸರೋವರ ಶ್ರೀನಿವಾಸ್‌, ಸೋಮಣ್ಣ ಬೇವಿರಮರದ್‌, ಬಿ. ಪುಷ್ಪ ಅಮರನಾಥ್‌, ಮಹಬೂಬ್‌ ಪಾಷ, ಕೀರ್ತಿ ಗಣೇಶ್‌, ಮಝರ್‌ ಖಾನ್‌, ಲಲಿತ್‌ ರಾಘವ್‌, ಜಿ.ಎಸ್‌ ಮಂಜುನಾಥ್‌ ಅವರಿಗೆ ಮಂಡಳಿ ಅಧ್ಯಕ್ಷರ ಸ್ಥಾನ ಖಚಿತ ಎಂದಯ ಹೇಳಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!