Mysore
23
overcast clouds

Social Media

ಮಂಗಳವಾರ, 06 ಅಕ್ಟೋಬರ್ 2026
Light
Dark

ರನ್ಯಾ ಕೇಸ್‌ನಲ್ಲಿ ಸರ್ಕಾರವೇ ಭಾಗಿಯಾಗಿದೆ: ಆರ್‌.ಅಶೋಕ್‌

ಬೆಂಗಳೂರು: ನಟಿ ರನ್ಯಾರವ್‌ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸರ್ಕಾರದ ಪಾತ್ರ ಕೂಡ ಇರಬಹುದು. ಪ್ರೋಟೋಕಾಲ್‌ ದುರ್ಬಳಕೆ ಬಗ್ಗೆ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಟಿ ರನ್ಯಾರಾವ್‌ ದುಬೈನಿಂದ ಬೆಂಗಳೂರಿನ ಏರ್‌ಪೋರ್ಟ್‌ಗೆ ಬಂದಿಳಿದಾಗ ಪೊಲೀಸರೆ ಅವರನ್ನು ಜೀಪ್‌ನಲ್ಲಿ ಕರೆತಂದಿರುವ ಮಾಹಿತಿ ಇದೆ. ಹೀಗಾಗಿ ರನ್ಯಾರಾವ್‌ ಪ್ರಕರಣದಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂದು ಆರೋಪಿಸಿದರು.

ನಟಿ ರನ್ಯಾರಾವ್‌ಗೆ ಹೇಗೆ ಪ್ರೋಟೊಕಾಲ್‌ ನೀಡಿದರು. ಪ್ರೋಟೊಕಾಲ್‌ ನೀಡಿರುವ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

Tags:
error: Content is protected !!