Mysore
30
few clouds

Social Media

ಸೋಮವಾರ, 23 ನವೆಂಬರ್ 2026
Light
Dark

ಬಾಟಲಿ ನೀರು ಎಷ್ಟು ಸುರಕ್ಷಿತ? ಗುಣಮಟ್ಟ, ಲೇಬಲ್‌ಗಳ ಮೇಲೆ FSSAI ಕಣ್ಣು!

ನವದೆಹಲಿ: ನೀವು ಖರೀದಿಸುವ ಬಾಟಲಿ ನೀರಿನ ಗುಣಮಟ್ಟ ಹೇಗಿದೆ? ಬಿಸ್ಲೆರಿ ನೀರಿನ ವಿವಾದದ ಬೆನ್ನಲ್ಲೇ, ವಿವಿಧ ಬ್ರ್ಯಾಂಡ್‌ಗಳ ಪ್ಯಾಕೇಜ್ಡ್‌ ಕುಡಿಯುವ ನೀರಿನ ಮೇಲೆ ಎಫ್‌ಎಸ್‌ಎಸ್‌ಎಐ ನಿಗಾ ಹೆಚ್ಚಿಸಿದೆ ಎಂದು ವರದಿಯಾಗಿದೆ.

ದೇಶದಲ್ಲಿ ಮಾರಾಟವಾಗುತ್ತಿರುವ ವಿವಿಧ ಬ್ರ್ಯಾಂಡ್‌ಗಳ ನೀರಿನ ಮಾದರಿಗಳನ್ನು ಯಾದೃಚ್ಛಿಕವಾಗಿ ಸಂಗ್ರಹಿಸಿ, ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಟಲಿಗಳ ಲೇಬಲ್‌ಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಪರೀಕ್ಷಾ ವರದಿಗಳು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.

ಬಿಸ್ಲೆರಿ ಘಟಕದಿಂದ ಸಂಗ್ರಹಿಸಿದ್ದ ಒಂದು ಮಾದರಿಯಲ್ಲಿ, ಬ್ರೋಮೇಟ್‌ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಾಗಿತ್ತು ಎಂದು ವರದಿ ತಿಳಿಸಿದೆ. ಲೀಟರ್‌ಗೆ ಗರಿಷ್ಠ 10 ಮೈಕ್ರೋಗ್ರಾಂ ಮಿತಿಯ ಬದಲು 12 ಮೈಕ್ರೋಗ್ರಾಂ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಗುಣಮಟ್ಟದ ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಧಿಕಾರ ಮುಂದಾಗಿದೆ. ಇತರ ಬ್ರ್ಯಾಂಡ್‌ಗಳ ನೀರಿನ ಗುಣಮಟ್ಟದ ಬಗ್ಗೆ ಪರೀಕ್ಷಾ ಫಲಿತಾಂಶ ಬಂದ ಬಳಿಕವೇ ಸ್ಪಷ್ಟತೆ ಸಿಗಲಿದೆ.

Tags:
error: Content is protected !!