Mysore
30
clear sky

Social Media

ಸೋಮವಾರ, 23 ನವೆಂಬರ್ 2026
Light
Dark

ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ; ಕೆ.ಆರ್‌.ನಗರದ ಗ್ರಾಮಸ್ಥರು ನಿರಾಳ!

ಕೆ.ಆರ್.ನಗರ: ಕಳೆದೊಂದು ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಗಂಡು ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಕೆ.ಆರ್‌.ನಗರ ತಾಲೂಕಿನ ಹೆಬ್ಬಾಳು ಹೋಬಳಿಯ ಹುರುಳಿ ಕಾಮೇನಹಳ್ಳಿ, ಗೌಡೇನಹಳ್ಳಿ ಫಾರ್ಮ್‌ಹೌಸ್‌ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಸಂಚಾರ ಹೆಚ್ಚಾಗಿತ್ತು. ಜಾನುವಾರು ಮತ್ತು ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯಿಂದ, ಸಂಜೆಯಾಗುತ್ತಿದ್ದಂತೆ ಜನರು ಹೊರಬರಲು ಆತಂಕಪಡುತ್ತಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ, ಚಿರತೆ ಓಡಾಟ ಹೆಚ್ಚಿದ್ದ ಸ್ಥಳದಲ್ಲಿ ಬೋನು ಇರಿಸಿತ್ತು. ಆಹಾರ ಅರಸಿ ಬಂದ ಸುಮಾರು ನಾಲ್ಕೈದು ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಕೊಂಡೊಯ್ದಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿದೆ. ಚಿರತೆ ಸೆರೆಯಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Tags:
error: Content is protected !!