Mysore
26
haze

Social Media

ಮಂಗಳವಾರ, 18 ನವೆಂಬರ್ 2025
Light
Dark

ಉದ್ಯಾನ ನಗರಿಯಲ್ಲಿ ಚೊಚ್ಚಲ ಕಂಬಳ

ಬೆಂಗಳೂರು: ರಾಜಧಾನಿಯಲ್ಲಿ ನಡೆಯಲಿರುವ ಮೊಟ್ಟಮೊದಲ ಕಂಬಳಕ್ಕೆ ವೇದಿಕೆ ಸಿದ್ಧಗೊಂಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‌ ೨೫ಮತ್ತು ೨೬ ಎರಡು ದಿನಗಳ ಕಾಳ ಕಾಯಕ್ರಮವನ್ನಿಉ ಹಮ್ಮಿಕೊಳ್ಳಲಾಗಿದೆ.
ಕಂಬಳದ ಹಿನ್ನೆಲೆಯಲ್ಲಿ ಗುರುವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಇಂದು ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಳೆ(ನವೆಂಬರ್ 25) ಸಂಜೆ 3:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ನಿನ್ನೆ ಎರಡು ಜೋಡಿ ಕೋಣಗಳು ಮಾತ್ರ ಬಂದಿದ್ದು, ಕಂಬಳದ ಕೆರೆಗೆ ಪೂಜೆ ಸಲ್ಲಿಸಿ, ಕೋಣಗಳನ್ನ ಓಡಿಸಿ ರಿಹರ್ಸಲ್ ಮಾಡಲಾಯ್ತು. 200ಕ್ಕೂ ಹೆಚ್ಚು ಕೋಣಗಳು ಕಂಬಳದಲ್ಲಿ ಭಾಗವಹಿಸಲಿದ್ದು, 157 ಮೀಟರ್ ಉದ್ದ, 8 ಮೀಟರ್ ಅಗಲದ ರಾಜಮಾಹಾರಾಜ ಹೆಸರಿನ ಟ್ರ್ಯಾಕ್​ನಲ್ಲಿ ಓಡಲಿವೆ.

ಕಂಬಳಕ್ಕೆ ಸಕಲ ಸಿದ್ಧತೆ:
ಅರಮನೆ ಮೈದಾನದ ಆವರಣದಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಕಲಾಗಿದೆ. ಇರುವ ಶೌಚಾಲಯಗಳ ಜತೆಗೆ 12 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋಣಗಳಿಗೆ ಟೆಂಟ್‌ಗಳನ್ನು ಹಾಕಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ನಿಗದಿಪಡಿಸಲಾಗಿದೆ. ಇದಕ್ಕಾಗಿ 8 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ರಾತ್ರಿಯೂ ಕಂಬಳ ನಡೆಸಲು ಅನುಮತಿ ಕೊಡಿ ಎಂದು ಸರಕಾರವನ್ನು ಕೇಳಿದ್ದೇವೆ. ಒಂದು ವೇಳೆ ಅನುಮತಿ ಸಿಕ್ಕರೆ ರಾತ್ರಿಯೂ ಕಂಬಳ ಮಾಡುತ್ತೇವೆ. ಇಲ್ಲದಿದ್ದರೆ ರಾತ್ರಿ 12 ಗಂಟೆವರೆಗೆ ನಡೆಸಲಾಗುವುದು ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರಿನ ಶಾಸಕರಾದ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಉಚಿತ ಪ್ರವೇಶ:
ಕಂಬಳ ವೀಕ್ಷಿಸಲು ಬರುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸುಮಾರು 2 ಸಾವಿರ ಮಂದಿ ಕೂತು ವೀಕ್ಷಣೆ ಮಾಡುವಂತಹ ಗ್ಯಾಲರಿ ಮತ್ತು 25 ರಿಂದ 30 ಸಾವಿರ ಜನರು ನಿಂತು ನೋಡುವ ವ್ಯವಸ್ಥೆ ಮಾಡಲಾಗಿದೆ. ಆಹಾರ ಮತ್ತಿತರ ಮಳಿಗೆಗಳ 150 ಕೌಂಟರ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿ ಹಣ ಕೊಟ್ಟು ಊಟ, ತಿಂಡಿಗಳನ್ನು ಸವಿಯಬಹುದು. ಎರಡು ದಿನಗಳಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಜನರು ಭಾಗಹಿಸುವ ನಿರೀಕ್ಷೆಯಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!