Mysore
29
scattered clouds

Social Media

ಭಾನುವಾರ, 10 ಮೇ 2026
Light
Dark

ಧರ್ಮಸ್ಥಳ ಪ್ರಕರಣ | ಮೂಳೆ ಪತ್ತೆಯ ಬಳಿಕ ತಾತ್ಕಾಲಿಕ ಶೆಡ್‌ ನಿರ್ಮಾಣ; ಉತ್ಖನನ ಮುಂದುವರಿಸಿದ ಎಸ್‌ಐಟಿ

Temporary Shed Built After Bone Discovery; Excavation Continues by SIT

ದಕ್ಷಿಣ ಕನ್ನಡ : ಧರ್ಮಸ್ಥಳ ಶವಗಳ ಶೋಧ ಕಾರ್ಯ ಮುಂದುವರೆದಿದ್ದು, ಇಂದು ಸಹ ದೂರುದಾರ ತೋರಿಸಿರುವ ಪಾಯಿಂಟ್‌ 6 ರಲ್ಲಿ ಮನುಷ್ಯರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

ಪಾಯಿಂಟ್‌ ನಂಬರ್‌ 6ರಲ್ಲಿ ಇನ್ನೂ ಹೆಚ್ಚಿನ ಅವಶೇಷಗಳು ಪತ್ತೆಯಾಗುತ್ತಿದ್ದು, ಶೋಧ ಕಾರ್ಯ ಮುಂದುವರಿಸಲು ಮಳೆ ಅಡ್ಡಿಯಾಗಿದೆ. ಹಾಗಾಗಿ, ಈ ಸ್ಥಳದಲ್ಲಿ ತಗಡಿನ ಶೀಟಿನ ತಾತ್ಕಲಿನ ಶೆಡ್‌ ನಿರ್ಮಿಸಲಾಗಿದೆ. ಉತ್ಖನನ ಮುಂದುವರೆದಿದೆ.

ನಾಳೆಯೂ ಪಾಯಿಂಟ್‌ ನಂಬರ್‌ 6ರಲ್ಲಿ ಶೋಧ ಮುಂದುವರಿಯುವ ಸಾಧ್ಯತೆ ಇದೆ. ಇಂದಿನ ಕಾರ್ಯಾಚರಣೆ ಸಂಜೆ ಸ್ಥಗಿತಗೊಳಿಸಲಾಗುತ್ತದಾ…. ಇಲ್ಲ ರಾತ್ರಿಯೂ ಮುಂದುವರಿಯಲಿದೆಯಾ? ಎಂಬ ಸ್ಪಷ್ಟತೆ ಸಿಕ್ಕಿಲ್ಲ.

ದೂರುದಾರ ಪಾಯಿಂಟ್‌ ನಂಬರ್‌ 6ರನ್ನು ಗುರುತಿಸಿದ್ದರು. ಸುಮಾರು 3 ಅಡಿ ಮಣ್ಣು ಅಗೆಯುವಾಗ ಮನುಷ್ಯರ ಅಸ್ತಿಪಂಜರದ ಅವಶೇಷಗಳು, ಅಂದರೆ ಮೂಳೆ, ತಲೆ ಬುರುಡೆಯ ತುಂಡು ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ.

Tags:
error: Content is protected !!