Mysore
21
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ದೆಹಲಿಯಲ್ಲಿ ಲಷ್ಕರ್‌ ಸಂಘಟನೆಯ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲೂ ಹೈಅಲರ್ಟ್‌ ಎಂದ ಪರಮೇಶ್ವರ್‌

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಷ್ಕರ್‌ ಎ ತೈಬಾ ಉಗ್ರ ಸಂಘಟನೆಯ ಶಂಕಿತರು ಬಂಧನವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾವು ಕೂಡ ರಾಜ್ಯದಲ್ಲಿ ಆಂತರಿಕವಾಗಿ ಅಲರ್ಟ್‌ ಮಾಡಿದ್ದೇವೆ. ನಮ್ಮ ಐಎಸ್‌ಡಿ ವಿಭಾಗಕ್ಕೆ ಅಲರ್ಟ್‌ ಮಾಡಿದ್ದೇವೆ. ಅಲ್ಲಿ ಬಂಧಿತ ಶಂಕಿತರಲ್ಲಿ ಬಾಂಗ್ಲಾದವರೂ ಇದ್ದಾರೆ. ನಮ್ಮಲ್ಲೂ ಬಾಂಗ್ಲಾವಾಸಿಗಳ ಪತ್ತೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಒಂದು ತಿಂಗಳಿಂದ ಈ ಅಭಿಯಾನ ನಡೆಯುತ್ತಿದೆ. ಎಂದು ಹೇಳಿದರು.

ಇನ್ನು ರಂಜಾನ್‌ ಹಬ್ಬ ಹಾಗೂ ಹೋಳಿ ಹಬ್ಬ ಆಚರಣೆ ವೇಳೆ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬಾರದು. ಸಂತೋಷದಿಂದ ಹಬ್ಬ ಆಚರಿಸಬೇಕು. ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ನಡೆಸಲು ಅವಕಾಶವಿಲ್ಲ. ಅದಕ್ಕೆ ಅವಕಾಶ ಕೊಡುವುದೂ ಇಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

 

Tags:
error: Content is protected !!