ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ ಎಸ್‌ಎಸ್‌ಎಲ್‌ಸಿ ಟಾಪರ್‌ ಅಂಕಿತಾ

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು, ತನ್ನನ್ನು ಬೆಂಗಳೂರಿಗೆ ಕರೆದು ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾಳೆ.

ಪತ್ರದಲ್ಲಿ, ಮುಖ್ಯಮಂತ್ರಿಯವರೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆಯ ರೂವಾರಿ ಎಂಬುದನ್ನು ತಿಳಿದು ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಶಾಲೆಗಳಿಂದ ಅನೇಕ ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿ, ಬಾಳಿಗೆ ದಾರಿದೀಪವಾಗಿದೆ ಎಂದು ವರ್ಣಿಸಿದ್ದಾಳೆ.

ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಂಕಿತಾರನ್ನು ಬೆಂಗಳೂರಿಗೆ ಕರೆಸಿಕೊಂಡು ಸನ್ಮಾನಿಸಿ, ಆಕೆಯ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಿದ್ದರು. ತನಗೆ ದೊರೆತ ಸತ್ಕಾರ, ಮುಂದಿನ ವಿದ್ಯಾಭ್ಯಾಸಕ್ಕೆ ಸಿಕ್ಕ ನೆರವಿಗೆ ಅಂಕಿತಾರವರು ಸಿಎಂಗೆ ಧನ್ಯವಾದ ತಿಳಿಸಿ ಈ ಪತ್ರ ಬರೆದಿದ್ದಾಳೆ.