‘ಆಂದೋಲನ’ ದಿನ ಪತ್ರಿಕೆಯ ಏ.೧೯ರ ‘ಹಾಡು ಪಾಡು’ ಸಂಚಿಕೆಯಲ್ಲಿ ‘ಪಂಪ ಪ್ರಶಸ್ತಿ’ ಸಂದ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರ ಬಗ್ಗೆ ಓ.ಎಲ್. ನಾಗಭೂಷಣ ಸ್ವಾಮಿ, ರಾಜೇಂದ್ರ ಚೆನ್ನಿ, ಸುರೇಶ್ ಕಂಜರ್ಪಣೆ ಅವರ ಲೇಖನಗಳ ನ್ನಾದರಿಸಿದ ‘ದೇವನೂರಿಗೆ ಆಗಮಿಸಿದ ಪಂಪ’ ಎಂಬ ಶೀರ್ಷಿಕೆ ದೇವನೂರರ ವ್ಯಕ್ತಿತ್ವಕ್ಕೆ ಪೂರಕ ಮತ್ತು ಅರ್ಥಪೂರ್ಣ ಎನಿಸಿತು. ಓ.ಎಲ್.ಎನ್ ಅವರ ‘ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು ’ ಇದುವರೆಗೂ ಅಜ್ಞಾತವಾಗಿದ್ದ ಅವರ ಒಡನಾಟದ ಕೆಲ ಆಪ್ತ ವಿವರಗಳು ಹೊಸ ತಲೆಮಾರಿನ ಲೇಖಕ, ಓದುಗ, ವಿಮರ್ಶಕರಿಗೆ ಪ್ರಸ್ತುತ ಹಾಗೂ ಆಗಾಗ ಮೆಲುಕು ಹಾಕಲು ದಕ್ಕಿರುವಂತಿವೆ. ಹಾಗಾಗಿ ಓ.ಎಲ್.ಎನ್. ಅವರ ಈ ಬರಹ ದೇವನೂರರ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಇನ್ನು ಸುರೇಶ್ ಕಂಜರ್ಪಣೆ ಅವರ ‘ದೇಮ ಎಂಬ ನೈತಿಕ ಕೈಮರ’ ರಾಜೇಂದ್ರ ಚೆನ್ನಿ ಅವರ ‘ಎಲ್ಲಾ ಮನೆಗಳ ಜೋತಮ್ಮದಿರು ಹರಸಲಿ’ ಬರಹಗಳು ದೇವನೂರರನ್ನು ಗ್ರಹಿಸಲು ಇನ್ನಷ್ಟು ಸಹಕಾರಿಯಾದವು.
– ಎಂ.ಜವರಾಜ್, ಮೈಸೂರು





