ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ನಡೆಸಿದ ಮಾಸಿಕ ತಪಾಸಣೆಯಲ್ಲಿ ಪ್ಯಾರಸಿಟಮಲ್ ಮಾತ್ರೆಗಳು ಗುಣಮಟ್ಟದಲ್ಲಿ ವೈಫಲ್ಯವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಸಣ್ಣಪುಟ್ಟ ಔಷಧಿಗಳನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಮಾರ್ಗಸೂಚಿಯನುಸಾರ ಎಲ್ಲಾ ಔಷಧಿಗಳನ್ನೂ ತಪಾಸಣೆಗೆ ಒಳಪಡಿಸಲಾಗಿದೆ.
ಅದರ ಪ್ರಕಾರ, ಪ್ರತೀ ತಿಂಗಳು ಔಷಧಿ, ಕಾಂತಿವರ್ಧಕ ಮತ್ತು ಸೌಂದರ್ಯವರ್ಧಕಗಳನ್ನು ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಕುಂಕುಮ ಹಾಗೂ ಪ್ಯಾರಸಿಟಮಲ್ ಔಷಧಿಗಳು ಗುಣಮಟ್ಟದಲ್ಲಿ ವೈಫಲ್ಯವಾಗಿವೆ ಎಂದಿದ್ದಾರೆ.





