ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆನ್ನೆ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿಯವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಲೀಲಾವತಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಲೀಲಾವತಿಯವರು ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುತ್ತಿದ್ದರು. ಬಹಳಾ ಮನೋಜ್ಞವಾಗಿ ನಟನೆ ಮಾಡುತ್ತಿದ್ದರು. ನಾನು ಅವರ ಅನೇಕ ಚಿತ್ರಗಳನ್ನು ನೋಡಿದ್ದೇನೆ. ನಮ್ಮ ಕಾಲದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿಯವರ ಜೋಡಿ ಬಹಳಾ ಜನಪ್ರಿಯವಾಗಿತ್ತು. ನಾನು 60-70 ರ ದಶಕದಲ್ಲಿ ನಾನು ವಿಧ್ಯಾರ್ಥಿಯಾಗಿದ್ದಾಗ ಲೀಲಾವತಿಯವರ ಸಿನಿಮಾಗಳನ್ನು ನೋಡಿದ್ದೇನೆ.
ಆಕೆ ಒಬ್ಬ ಪರಿಪೂರ್ಣ ಕಲಾವಿದೆ. ಸಾಮಾಜಿಕ ಪಾತ್ರವಿರಲಿ, ಐತಿಹಾಸಿಕ ಪಾತ್ರವಿರಲಿ ಯಾವುದೇ ಪಾತ್ರ ಕೊಟ್ಟರು ಸಹ ಲೀಲಾಜಾಲವಾಗಿ ನಟನೆ ಮಾಡುತ್ತಿದ್ದರು. ಭಕ್ತ ಕುಂಬಾರ ಸಿನಿಮಾದಲ್ಲಿನ ಅವರ ಅಭಿನಯವನ್ನು ಮೆಚ್ಚಲೇ ಬೇಕು. ಅವರ ಸಾವು ನನಗೆ ದುಖಃ ತಂದಿದೆ ಅವರ ನಿಧನದ ಬಗ್ಗೆ ನನ್ನ ಸಂತಾಪಗಳು ಎಂದಿದ್ದಾರೆ.
ಕಳೆದ ವಾರ ಲೀಲಾವತಿಯವರ ಫಾರ್ಮ್‌ಹೌಸ್ ಗೆ ಹೋಗಿ ಆರೋಗ್ಯ ವಿಚಾರಿಸಿದ್ದೆ. ಆಗ ವಿನೋದ್ ರಾಜ್ ಕೂಡ ಇದ್ದರು. ತಾಯಿ ನಿನ್ನ ಮೇಲೆ ಬಹಳ ಪ್ರೀತಿ ಹೊಂದಿದ್ದರು. ನೀವಿಬ್ಬರೂ ಆದರ್ಶ ತಾಯಿ ಮಗ ಕೊನೆ ಘಳಿಗೆಯಲ್ಲಿ ಚೆನ್ನಾಗಿ ನೋಡಿಕೊಳ್ಳಪ್ಪ ಎಂದು ಹೇಳಿದ್ದೆ. ಏನೇ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದೆ. ಆದರೆ ಅವರು ನನ್ನಿಂದ ಏನೂ ಸಹಾಯ ಕೇಳಲಿಲ್ಲ ಎಂದು ಹೇಳಿದರು.