Mysore
18
overcast clouds

Social Media

ಬುಧವಾರ, 28 ಜನವರಿ 2026
Light
Dark

ಮತಗಳ ಓಲೈಕೆಗಾಗಿ ಸಿದ್ದರಾಮಯ್ಯ ಅನ್ಯಧರ್ಮಿಯರ ಪೇಟ ಹಾಕಿಕೊಳ್ಳುತ್ತಾರೆ: ಯತ್ನಾಳ್‌ ಲೇವಡಿ

ಬಾಗಲಕೋಟೆ: ಹಾಲುಮತ ಸಮುದಾಯದ ಕಾರ್ಯಕ್ರಮದಲ್ಲಿ ಪೇಟ ತೊಡಿಸಲು ಹೋದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸುತ್ತಾರೆ. ಈದ್-ಮಿಲಾದ್ ಪ್ರಯುಕ್ತ ನಡೆದ ಶಾಂತಿ ಸಮಾವೇಶದಲ್ಲಿ ಪೇಟ ತೊಡೆಸಿದರೆ ಖುಷಿಯಾಗಿ ಹಾಕಿಕೊಳ್ಳುತ್ತಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವುದೇ ಶುಭ ಸಮಾರಂಭ ನಡೆಯುವ ಮುನ್ನ ಹಾಲು ಮತದವರನ್ನು ಕರೆಸಿ, ಅವರಿಂದ ಕಂಬಳಿ ಹಾಸಿ, ನೀರಿನ ತಂಬಿಗೆ ಇರಿಸುವ ಮೂಲಕ ಶುಭಾರಂಭ ಮಾಡಲಾಗುತ್ತದೆ. ಅಂತಹ ಪವಿತ್ರ ಸಮುದಾಯದ ಪೇಟವನ್ನು ಅದೇ ಜಾತಿಯಲ್ಲಿ ಹುಟ್ಟಿದ ಸಿದ್ದರಾಮಯ್ಯ ತಿರಸ್ಕರಿಸುತ್ತಾರೆ. ಆದರೆ ಮತಗಳ ಓಲೈಕೆಗಾಗಿ ಅನ್ಯಧರ್ಮಿಯರ ಪೇಟ ಹಾಕಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಣೇಶೋತ್ಸವ ಆಚರಣೆಗೆ ನಾನಾ ರೀತಿಯ ಷರತ್ತುಗಳನ್ನು ಹಾಕಲಾಗುತ್ತಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ. 2028ಕ್ಕೆ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ ಗಣೇಶೋತ್ಸವದ ಮೇಲೆ ಕಲ್ಲು ತೂರುವ ಯಾರಿಗೂ ಉಳಿಗಾಲ ಇರುವುದಿಲ್ಲ. ಗಣೇಶೋತ್ಸವದ ಹಿಂದೆ ಜೆಸಿಬಿ ಸಾಗುತ್ತಿರುತ್ತದೆ. ಕಲ್ಲು ಹೊಡೆದವರ ಮನೆಗೆ ತಕ್ಷಣವೇ ಜೆಸಿಬಿ ನುಗ್ಗಿಸಿ ಧ್ವಂಸಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಈ ಹಿಂದೆ ದೇಶದ ಜನ ಅಟಲ್‍ಬಿಹಾರಿ ವಾಜ್‍ಪೇಯಿ, ನರೆಂದ್ರ ಮೋದಿ ಅವರು ಪ್ರಧಾನಿಗಳಾಬೇಕೆಂದು ಬಯಸಿದ್ದರು. ಅದರಂತೆ ಅವರು ಪ್ರಧಾನಿಗಳಾದರು. ಬಸನಗೌಡ ಪಾಟೀಲ್ ಮುಖ್ಯಮಂತ್ರಿಯಾಗಬೇಕೆಂದು ರಾಜ್ಯದ ಜನ ಮನೆ ಮನೆಗಳಲ್ಲಿ ಮಾತನಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ರಾಜ್ಯದ ಹಿಂದೂಗಳ ಮತಗಳಿಂದ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:
error: Content is protected !!