Mysore
19
broken clouds

Social Media

ಭಾನುವಾರ, 25 ಜನವರಿ 2026
Light
Dark

ಸುಪ್ರೀಂಕೋರ್ಟ್ ಸಿಜೆಐ ಮೇಲೆ ಚಪ್ಪಲಿ ಎಸೆತ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಬೆಂಗಳೂರು: ವಿಚಾರಧಾರೆಗೆ ತೊಂದರೆಯಾಗಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಚಪ್ಪಲಿ ತೂರುವುದಾದರೆ, ಸಾವಿರಾರು ವರ್ಷಗಳಿಂದ ತೊಂದರೆಗೆ ಒಳಗಾದವರು, ಅವಮಾನಕ್ಕೆ ಸಿಲುಕಿದವರು ಇಂತಹ ವ್ಯವಸ್ಥೆಯನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಘಟನೆಗೆ ದೇಶಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಖಂಡನಾ ಪ್ರತಿಕ್ರಿಯೆಗಳು ವ್ಯಕ್ತವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಓದಿ : ಓದುಗರ ಪತ್ರ: ಸಿಜೆಐ ಮೇಲೆ ಶೂ ಎಸೆತ ಹೇಯ ಕೃತ್ಯ

ನಾನು ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಯಸುವುದಿಲ್ಲ. ಆದರೆ, ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ. ಇಂತಹ ವಿಚಾರಧಾರೆಗಳನ್ನು ಹಾಗೂ ಸಮಾಜದಲ್ಲಿನ ಮಾನಸಿಕ ಸ್ಥಿತಿಗಳನ್ನು ಬೆಳೆಸುತ್ತಿರುವ ಸಂಘಟನೆಗಳನ್ನು ಖಂಡಿಸಬೇಕಿದೆ ಮತ್ತು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಈವರೆಗೂ ಇಂತಹ ಅವಮಾನ ಆಗಿರಲಿಲ್ಲ. ಧರ್ಮದ ಹೆಸರಿನಲ್ಲಿ ಹಾಗೂ ವಿಶೇಷ ವಿಚಾರಧಾರೆಯ ವ್ಯಕ್ತಿ ಮಾಡಿರುವ ಕೃತ್ಯ ಖಂಡನೀಯ. ಕಾಂಗ್ರೆಸ್‌‍ ಪಕ್ಷ ಈಗಾಗಲೇ ತನ್ನ ಆಕ್ಷೇಪವನ್ನು ತಿಳಿಸಿದೆ. ತಾವು ಕೂಡ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು.

ಈ ಘಟನೆಗೆ ಪ್ರಗತಿಪರ ಆಲೋಚನೆಯಿರುವ ವ್ಯಕ್ತಿಗಳು, ವಕೀಲರು, ಸರ್ಕಾರಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳು, ಸರ್ಕಾರಗಳು, ವಕೀಲರು ಹಾಗೂ ಸಮಾಜ ಪ್ರತಿಕ್ರಿಯಿಸಿಲ್ಲ. ಯಾರೂ ಕೂಡ ಇಂತಹದನ್ನು ಸಹಿಸಬಾರದು ಎಂದು ಹೇಳಿದರು.

Tags:
error: Content is protected !!