ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಾವಣೆ ಮಾಡಲು ಆರ್‌ಎಸ್‌ಎಸ್ ಹೈ ವೋಲ್ಟೋಜ್ ಸಭೆ ನಡೆಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಬುಧವಾರ(ಅ.9) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂಬ ಕೂಗಿದೆ. ಹೀಗಾಗಿ ಮೋದಿ ಅವರನ್ನು ಕೆಳಗಿಳಿಸಿ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿಯನ್ನಾಗಿ ನೇಮಿಸಲು ಚಿಂತನೆ ನಡೆದಿದೆ ಎಂದರು.
ಮೈಸೂರಿನಲ್ಲಿ ಸಚಿವ ಜಾರಕಿಹೊಳಿ ಸೇರಿದಂತೆ ಇನ್ನಿತರ ರಾಜಕೀಯ ನಾಯಕರು ಪಕ್ಷದ ಮುಂಖಡರೊಂದಿಗೆ ಸಭೆ ನಡೆಸುವುದರಲ್ಲಿ ತಪ್ಪೇನಿಲ್ಲ. ಎಲ್ಲ ಕಡೆಗಳಲ್ಲಿಯೂ ರಾಜಕೀಯ ಸಭೆಗಳು ಜರುಗುತ್ತವೆ. ಆದರೆ, ನರೇಂದ್ರ ಮೋದಿ ಅವರನ್ನು ಬದಲಾಯಿಸಲು ಆರ್‌ಎಸ್‌ಎಸ್ ಸಭೆ ನಡೆಸಿರುವುದು ಮುಖ್ಯ ಎಂದು ಹೇಳಿದರು.
ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಹರಿಯಾಣದಲ್ಲಿ ಬಿಜೆಪಿ ಪಕ್ಷದವರು ವಾಮ ಮಾರ್ಗದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.