ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ವಿಚಾರಣೆಯನ್ನು ನ್ಯಾಯಾಲಯ ನವೆಂಬರ್.19ಕ್ಕೆ ಮುಂದೂಡಿಕೆ ಮಾಡಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನು ಓದಿ: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ಬಿಡುಗಡೆ ಪ್ರಕರಣ: ನಟ ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ
ಸಿಆರ್‌ಪಿಸಿ ಸೆಕ್ಷನ್ 294 ಅಡಿ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದ್ದು, ಸಿಆರ್‌ಪಿಸಿ ಸೆಕ್ಷನ್ 294ರ ಅಡಿ ಎಸ್‌ಪಿಪಿ ಸಚನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡಲು ದರ್ಶನ್ ಸೇರಿದಂತೆ ಆರೋಪಿಗಳ ಪರ ವಕೀಲರು ಕಾಲಾವಕಾಶ ಕೋರಿದರು. 5000ಕ್ಕೂ ಹೆಚ್ಚಿನ ದಾಖಲೆಗಳು ಇರುವುದರಿಂದ 15 ದಿನ ಸಮಯಕ್ಕೆ ಮನವಿ ಮಾಡಿದರು. ಬಳಿಕ 57ನೇ ಸಿಸಿಎಚ್ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್.19ಕ್ಕೆ ಮುಂದೂಡಿಕೆ ಮಾಡಿದೆ.





