Mysore
24
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಲಾಂಗ್‌ ಹಿಡಿದು ರೀಲ್ಸ್‌ ಪ್ರಕರಣ: ಮತ್ತೆ ಅರೆಸ್ಟ್‌ ಆದ ರಜತ್‌ 

ಬೆಂಗಳೂರು: ಲಾಗ್‌ ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಜತ್‌ನನ್ನು ಬಂಧಿಸಲಾಗಿದೆ.

ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್‌ ನೀಡಿದ್ದರು.

ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆಯಲ್ಲಿ ಎರಡು ಬಾರಿ ನೋಟಿಸ್‌ ನೀಡಿದ್ದರು. ಆದರೆ ರಜತ್‌ ಪೊಲೀಸ್‌ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್‌ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು.

ಹೆಚ್ಚಿನ ಮಾಹಿತಿ:- ಲಾಂಗ್ ಹಿಡಿದು ರೀಲ್ಸ್ ಪ್ರಕರಣ: ರಜತ್‌ಗೆ ಮತ್ತೆ ನೋಟಿಸ್‌ ನೀಡಿದ ಪೊಲೀಸರು

ಈ ಹಿನ್ನೆಲೆಯಲ್ಲಿ ಕೋರ್ಟ್‌ ಸೂಚನೆ ಮೇರೆಗೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನು ಬಂಧಿಸಿದ್ದಾರೆ.

ಇನ್ನು ಮಾಹಿತಿಯ ಪ್ರಕಾರ ವಿನಯ್‌ ಗೌಡಗೂ ಬಂಧನದ ಭೀತಿ ಎದುರಾಗಿದೆ ಎನ್ನಲಾಗಿದ್ದು, ವಿನಯ್‌ರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags: