Mysore
25
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ರಾಮೇಶ್ವರಂ ಕೆಫೆ ಸ್ಪೋಟ :ಎನ್‌ಐಎಗೆ ಸ್ಪೋಟಕ ಮಾಹಿತಿ ಲಭ್ಯ !

ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಗೆ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಶಂಕಿತ ಬಾಂಬರ್ ಜೊತೆಗೆ ಮತ್ತೊಬ್ಬ ಆರೋಪಿ ಇದ್ದ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಎಐ ಮಹತ್ವದ ಸುಳಿವು ಪತ್ತೆಯಾಗಿದ್ದು, ಬಾಂಬರ್ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಹೋಗಿದ್ದ.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೂ ಮುನ್ನ ಎರಡು ತಿಂಗಳು ತಮಿಳುನಾಡಿನಲ್ಲಿ ವಾಸವಾಗಿದ್ದ. ಬಾಂಬರ್ ಜೊತೆಗೆ ಮತ್ತೊಬ್ಬ ಆರೋಪಿ ಇದ್ದ ಎನ್ನಲಾಗಿದೆ.

ಇನ್ನು ಮಾರ್ಚ್ 1 ರಂದು ಕೆಫೆಗೆ ಬಾಮಬ್ ಇಡಲು ಬಂದಾಗ ಕ್ಯಾಪ್ ಧರಿಸಿದ್ದ ಶಂಕಿತ ವ್ಯಕ್ತಿ ಬಳಿಕ ಹೂಡಿ ಸಮೀಪದ ಮಸೀದಿಯಲ್ಲಿ ತಾನು ಧರಿಸಿದ್ದ ಶರ್ಟ್ ಹಾಗೂ ಕ್ಯಾಪ್ ಅನ್ನು ಬಿಸಾಕಿ ಪರಾರಿಯಾಗಿದ್ದ. ಮಸೀದಿಯಲ್ಲಿ ಸಿಕ್ಕ ಟೋಪಿ ಹಿಡಿದು ಶಂಕಿತನ ಬೆನ್ನತ್ತಿದ ರಾಷ್ಟ್ರೀಯ ತನಿಖಾ ದಳಕ್ಕೆ ಬಹುಮುಖ್ಯ ಸುಳಿವು ಲಭ್ಯವಾಗಿದ್ದು, ಚೆನ್ನೈನಲ್ಲಿ ಶಂಕಿತ ಉಗ್ರ ಕ್ಯಾಪ್ ಖರೀದಿಸಿದ್ದ ಅಂಗಡಿಯನ್ನು ಎನ್ ಐಎ ತಂಡ ಪತ್ತೆಹಚ್ಚಿದೆ

Tags: