Mysore
23
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ರಮೇಶ್‌ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದು ವಿಜಯೇಂದ್ರ: ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌

Ramesh Jarkiholi CD released by Vijayendra: Basanagouda Patil Yatnal is the new bomb

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ರಮೇಶ್‌ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಈ ಕುರಿತು ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ್‌ ಸೇರಿ ರಮೇಶ್‌ ಜಾರಕಿಹೊಳಿ ಜೀವನವನ್ನೇ ಹಾಳು ಮಾಡಿದರು ಎಂದು ಬಾಂಬ್‌ ಸಿಡಿಸಿದರು.

ವಿಜಯೇಂದ್ರ ವಿರುದ್ಧ ನಮ್ಮ ಟೀಂ ಬಹಳ ದೊಡ್ಡದಿದೆ. ತಟಸ್ಥರು ಕೂಡ ವಿಜಯೇಂದ್ರ ವಿರುದ್ಧವೇ ಇದ್ದಾರೆ. ಅಷ್ಟೇ ಏಕೆ? ಆರ್.‌ಅಶೋಕ್‌, ಬೊಮ್ಮಾಯಿ, ಅಶ್ವಥ್‌ ನಾರಾಯಣ್‌, ಸಿ.ಟಿ.ರವಿ ಒಳಗೊಳಗೆ ವಿಜಯೇಂದ್ರ ವಿರುದ್ಧವಿದ್ದಾರೆ. ಇಂತಹ ನಾಟಕ ಕಂಪನಿಯಿಂದಲೇ ಬಿಜೆಪಿ ಈ ಸ್ಥಿತಿಗೆ ಬಂದಿದೆ. ನಮ್ಮ ಹಾಗೇ ಯಾರೂ ಕೂಡ ಗಟ್ಟಿಯಾಗಿ ನಿಲ್ಲಲಿಲ್ಲ ಎಂದು ಕಿಡಿಕಾರಿದರು.

Tags:
error: Content is protected !!