Mysore
24
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಗುರುವಾರ ಮಧ್ಯರಾತ್ರಿ ರಾಜ್ಯಕ್ಕೆ ಆಗಮಿಸಲಿರುವ ಪ್ರಜ್ವಲ್‌

ಬೆಂಗಳೂರು: ಲೈಂಗಿಕ ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ರಾಜ್ಯಕ್ಕೆ ವಾಪಸ್‌ ಆಗಲು ಕೌಂಟ್‌ಡೌನ್‌ ಶುರುವಾಗಿದೆ.

ಪ್ರಜ್ವಲ್ ಜರ್ಮನಿಯ ಮ್ಯೂನಿಕ್‌ನಲ್ಲಿ ಗುರುವಾರ(ಮೇ.30) ಮಧ್ಯಾಹ್ನ 3.30 ಕ್ಕೆ ಲುಫ್ತಾನ್ಸ್‌ ಏರ್‌ಲೈನ್ಸ್‌ ವಿಮಾನ ಹತ್ತಲಿದ್ದಾರೆ. ಅಂದಾಜು 8 ಗಂಟೆಗಳ ಪ್ರಯಾಣದ ಬಳಿಕ ಮಧ್ಯರಾತ್ರಿ ಅಂದರೆ ಶುಕ್ರವಾರ(ಮೇ.31) 12;30 ಕ್ಕೆ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ.

ಪ್ರಜ್ವಲ್‌ಗೆ ಬ್ಯುಸಿನೆಸ್‌ ಕ್ಲಾಸ್‌ನ 3ಕೆ ಸೀಟ್‌ ಬುಕ್‌ ಆಗಿದೆ. ಈಗಾಗಲೇ ಆನ್‌ಲೈನ್‌ ಚೆಕ್‌ಇನ್‌ ಪ್ರಕ್ರಿಯೆ ಮುಗಿಸಿರುವ ಪ್ರಜ್ವಲ್‌ ಅಂತಿಮವಾಗಿ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇತ್ತ ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ. ಪ್ರಜ್ವಲ್‌ ಬಂದ ತಕ್ಷಣ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Tags:
error: Content is protected !!