Mysore
20
overcast clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಲೈಂಗಿಕ ದೌರ್ಜನ್ಯ ಪ್ರಕರಣ; ಪ್ರಜ್ವಲ್‌ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಜುಲೈ.8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಹಾಸನದಲ್ಲಿ ವೈರಲ್‌ ಆದ ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಆರೋಪದಡಿ ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಿದ್ದಾನೆ. ಅತ್ಯಾಚಾರ ಆರೋಪ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಇಂದು ಆರೋಪಿ ಪ್ರಜ್ವಲ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.

ಕೋರ್ಟ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನಿಗೆ ಜಡ್ಜ್‌ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮಗೆ ಮೆಡಿಸನ್‌ ಕೊಡ್ತಿದ್ದಾರಾ ಎಂಬ ಜಡ್ಜ್‌ ಪ್ರಶ್ನೆಗೆ ಪ್ರಜ್ವಲ್‌ ಹೌದು ಮೆಡಿಸನ್‌ ಕೊಡ್ತಿದ್ದಾರೆ ಎಂದು ಉತ್ತರ ನೀಡಿದ್ದಾನೆ. ಪೊಲೀಸ್‌ ಕಸ್ಟಡಿಯಲ್ಲಿ ಏನಾದರೂ ತೊಂದರೆ ಆಯ್ತಾ ಎಂಬ ಪ್ರಶ್ನೆಗೆ ಪ್ರಜ್ವಲ್‌ ಇಲ್ಲಾ ನನಗೆ ಯಾವುದೇ ತೊಂದರೆಯಿಲ್ಲ ಎಂದು ಉತ್ತರ ಕೊಟ್ಟಿದ್ದಾನೆ.

ಬಳಿಕ ಜಡ್ಜ್‌ ಪೊಲೀಸರ ಬಳಿ ಪ್ರಜ್ವಲ್‌ ಮೆಡಿಕಲ್‌ ಟೆಸ್ಟ್‌ನ ವರದಿ ಕೇಳಿದ್ದಾರೆ. ಎಲ್ಲಾ ವರದಿಗಳನ್ನು ನೋಡಿದ ಪೊಲೀಸರು, ಮತ್ತೆ ಪ್ರಜ್ವಲ್‌ ರೇವಣ್ಣನನ್ನು ಜುಲೈ.8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

 

 

 

 

Tags:
error: Content is protected !!