ಬೆಂಗಳೂರು: ರಾಜ್ಯದಲ್ಲಿ ಮತ್ತೆ ಎಂಪಾಕ್ಸ್‌ನ ವೈರಸ್ ಪ್ರಕರಣ ಪತ್ತೆಯಾಗಿದೆ. ನಗರದ ಎನ್‍ಐವಿ ಪ್ರಯೋಗಾಲಯದಲ್ಲಿ ವ್ಯಕ್ತಿಯೊಬ್ಬರ ರಕ್ತದ ಮಾದರಿ ಪರೀಕ್ಷೆ ನಡೆಸಿದಾಗ ಅವರಿಗೆ ಎಂಪಾಕ್ಸ್ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ದುಬೈ ಪ್ರವಾಸದ ಹಿಸ್ಟರಿ ಹೊಂದಿರುವ 40 ವರ್ಷದ ವ್ಯಕ್ತಿಯಲ್ಲಿ ಎಂಪಾಕ್ಸ್‌ಸ ವೈರಸ್ ಸೋಂಕು ಇರುವುದು ಗೊತ್ತಾಗಿದೆ.
ಎಂಪಾಕ್ಸ್‌ನ ವೈರಸನ್ನು ಪಬ್ಲಿಕ್ ಹೆಲ್ತ್ ಎರ್ಮಜೆನ್ಸಿ ಆಫ್ ಇಂಟನ್ರ್ಯಾಷನಲ್ ಎಂದು ವಿಶ್ವಸಂಸ್ಥೆ ಘೋಷಿಸಿರುವ ಸಂದರ್ಭದಲ್ಲೇ ರಾಜ್ಯದ ವ್ಯಕ್ತಿಯೊಬ್ಬರಿಗೆ ಆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ರಕ್ತದ ಮಾದರಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಎನ್‍ಐವಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಎಂಪಾಕ್ಸ್‌ನ ಸೋಂಕು ಪತ್ತೆಯಾಗಿದೆ.
ಹೀಗಾಗಿ ರಾಜ್ಯದೆಲ್ಲೆಡೆ ಎಂಪಾಕ್ಸ್ ಸೋಂಕು ಪತ್ತೆ ಕಾರ್ಯವನ್ನು ಆರೋಗ್ಯ ಇಲಾಖೆ ಚುರುಕುಗೊಳಿಸಿದೆ.