ಬೆಂಗಳೂರು: ಸರ್ಕಾರಿ ಸೇವೆಗಳ ನೇಮಕಕ್ಕೆ ವಿಳಂಬವಾಗಿರುವ ಒಳಮೀಸಲಾತಿ ಜಾರಿಯ ಕುರಿತಾಗಿ ಗೃಹ ಸಚಿವರು, ಸೇರಿದಂತೆ ಹಲವಾರು ಸಚಿವರು ಮಹತ್ವದ ಸಭೆ ನಡೆಸಿದ್ದಾರೆ.
ಇಂದು ನಗರದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರ ನಿವಾಸದಲ್ಲಿ ಸಚಿವರು, ಶಾಸಕರು ಸಭೆ ನಡೆಸಿ, ಒಳಮೀಸಲಾತಿ ಜಾರಿಯ ವಿಳಂಬಕ್ಕೆ ಆಗುತ್ತಿರುವ ಕಾರಣಗಳು, ಅದರ ಸಾಧಕ-ಬಾಧಕಗಳ ಕುರಿತು ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಶಾಸಕರಾದ ಸುಧಾಮ ದಾಸ್, ಪ್ರಸಾದ್ ಅಬ್ಬಯ್ಯ, ದರ್ಶನ್ ಧ್ರುವ ನಾರಾಯಣ್, ಶ್ರೀನಿವಾಸ ಮತ್ತು ಡಾ.ತಿಮ್ಮಯ್ಯ ಉಪಸ್ಥಿತರಿದ್ದರು.