Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಬಿಜೆಪಿ ನಾಯಕರಿಗೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಓಪನ್‌ ಚಾಲೆಂಜ್‌: ಏನದು ಗೊತ್ತಾ?

ಕೊಪ್ಪಳ: ಬಿಜೆಪಿಯವರು ಒಂದೇ ಒಂದು ಮನೆ ಕೊಟ್ಟಿದ್ದು ಸಾಬೀತಾದರೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಓಪನ್‌ ಚಾಲೆಂಜ್‌ ಹಾಕಿದ್ದಾರೆ.

ಈ ಕುರಿತು ಕೊಪ್ಪಳದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಮ್‌ ತಾಕತ್ತು ಬಗ್ಗೆ ಆರ್.ಅಶೋಕ್‌ ಮಾತನಾಡುತ್ತಾರೆ. ಆದ್ದರಿಂದ ನಾನು ಬಿಜೆಪಿ ನಾಯಕರಿಗೆ ಓಪನ್‌ ಚಾಲೆಂಜ್‌ ಹಾಕುತ್ತೇನೆ. ಒಂದೇ ಒಂದು ಮನೆ ಕೊಟ್ಟಿದ್ದು ಸಾಬೀತಾದರೆ ನಾನು ಇಂದೇ ರಾಜೀನಾಮೆ ನೀಡುತ್ತೇನೆ ಎಂದರು.

ಇದನ್ನೂ ಓದಿ:-ಯಳಂದೂರು: ಬೀದಿ ನಾಯಿಗಳ ದಾಳಿಗೆ ಕುರಿ ಸಾವು

ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯವರದ್ದು ಬರೀ ಸುಳ್ಳು. ಸಿಎಂ ಸಿದ್ದರಾಮಯ್ಯ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರೆ. ಆರನೇ ಗ್ಯಾರಂಟಿ ವಸತಿ ಯೋಜನೆ ಎಂದೇ ನಾನು ಹೇಳುತ್ತೇನೆ ಎಂದು ತಿಳಿಸಿದರು.

Tags:
error: Content is protected !!