Mysore
28
broken clouds

Social Media

ಭಾನುವಾರ, 25 ಜನವರಿ 2026
Light
Dark

ಆರ್‌ಎಸ್‌ಎಸ್‌ಗೆ ಟಾಂಗ್‌ ಕೊಟ್ಟ ಸಚಿವ ಎಂ.ಬಿ.ಪಾಟೀಲ್‌

ವಿಜಯಪುರ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದವರಿಂದ ನಾವು ಏನು ಕಲಿಯಬೇಕಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಆರ್‌ಎಸ್‌ಎಸ್‌ಗೆ ಟಾಂಗ್‌ ಕೊಟ್ಟಿದ್ದಾರೆ.

ಈ ಕುರಿತು ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಇವೆರೆಲ್ಲಾ ದೇಶಭಕ್ತರಾ? ಇವರಿಂದ ನಾವು ಏನು ಕಲಿಯಬೇಕು? ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲವೋ ಅವರಿಂದ ನಾವೆಲ್ಲಾ ಈಗ ಏನು ಕಲಿಯಬೇಕಿದೆ ಎಂದು ಲೇವಡಿ ಮಾಡಿದರು.

ಇದನ್ನು ಓದಿ: ಆರ್‌ಎಸ್‌ಎಸ್‌ ಪಥಚಂಚಲನ ; ಹೈಕೋರ್ಟ್ ಷರತ್ತುಬದ್ಧ ಅನುಮತಿ ‌

ಇನ್ನು ರಾಜ್ಯದಲ್ಲಿ ಆರ್‌ಎಸ್‌ಎಸ್‌ಗೆ ಕಡಿವಾಣ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮ ಇರಲಿ ಅನುಮತಿ ಪಡೆಯಲೇಬೇಕು. ಇದರಲ್ಲಿ ಆರ್‌ಎಸ್‌ಎಸ್‌ ಸಂಘಟನೆ ಒಂದೇ ಬರಲ್ಲ. ಯಾವುದೇ ಸಂಘಟನೆ ಇದ್ದರೂ ಅನುಮತಿ ಪಡೆದು ಕಾರ್ಯಕ್ರಮ ಮಾಡೋದು ಕಡ್ಡಾಯ. ಹಾಗಾಗಿ ಎಲ್ಲರೂ ಅನುಮತಿ ಪಡೆಯಲೇಬೇಕು ಎಂದು ತಿಳಿಸಿದರು.

Tags:
error: Content is protected !!