Mysore
24
mist

Social Media

ಶುಕ್ರವಾರ, 14 ನವೆಂಬರ್ 2025
Light
Dark

ನಾವೇನು ಡಿಕೆಶಿ ಆಸ್ತಿ ಬರೆಸಿಕೊಂಡಿಲ್ಲ: ಡಿಸಿಎಂ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ಬಹಿರಂಗ ಅಸಮಾಧಾನ

ತುಮಕೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಬೇಜಾರಾಗಲು ಅವರ ಆಸ್ತಿ ಬರೆಸಿಕೊಂಡಿದ್ದೀವಾ ಎನ್ನುವ ಮೂಲಕ ಸಚಿವ ಕೆ.ಎನ್.ರಾಜಣ್ಣ ಅವರು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಡಿನ್ನರ್‌ ಪಾರ್ಟಿ ವಿಚಾರದ ಕುರಿತು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿನ್ನರ್‌ ಪಾರ್ಟಿ ಕ್ಯಾನ್ಸಲ್‌ ಎಲ್ಲಿ ಆಗಿದೆ? ಮುಂದೂಡಿದ್ದೇವೆ ಅಷ್ಟೇ. ಕ್ಯಾನ್ಸಲ್‌ ಇಲ್ಲ. ಈಗಾಗಲೇ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಕೂಡ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಮೊನ್ನೆ ನಡೆದಿರುವ ಡಿನ್ನರ್‌ ಪಾರ್ಟಿ ಬಗ್ಗೆ ಗೊಂದಲ ಆಗಿದೆ. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗೋದು ಬೇಡ. ಅದನ್ನು ಮುಂದೂಡಬೇಕು ಎಂದು ಹೇಳಿತ್ತು. ಅದಕ್ಕೆ ಸಭೆ ಮುಂದೂಡಿಕೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಡಿನ್ನರ್‌ ಮೀಟಿಂಗ್‌ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಮುಂದಿನ ತಿಂಗಳ 14ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತದೆ. ಚಾಮರಾಜನಗರ ಜಿಲ್ಲೆಗೆ ಹೋದರೆ ಸಿಎಂ ಹಾಗೂ ಸಚಿವ ಸ್ಥಾನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯುವ ಮೊದಲೇ ಡಿನ್ನರ್‌ ಮೀಟಿಂಗ್‌ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬೇಜಾರಾಗಲು ಅವರ ಆಸ್ತಿಯನ್ನು ಏನಾದರೂ ನಾವೆಲ್ಲಾ ಬರೆಸಿಕೊಂಡಿದ್ದೀವಾ? ಇದೆಲ್ಲಾ ಸುಮ್ಮನೆ ಅಷ್ಟೇ ಎಂದು ಡಿಕೆಶಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

Tags:
error: Content is protected !!