Mysore
22
light rain

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಸೇನಾ ವಾಹನ ಅಪಘಾತ : ಕರ್ನಾಟಕದ ಮೂವರು ಯೋಧರ ಸಾವು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಘಟನೆಯಲ್ಲಿ ಒಟ್ಟು ಐವರು ಯೋಧರು ಹುತಾತ್ಮರಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್‌ ದಯಾನಂದ ತರಕಣ್ಣವರ(45), ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್(33) ಮಹಾಲಿಂಗಪುರದ ಮಹೇಶ್‌ ಮರಿಗೊಂಡ (25) ಮೃತ ಯೋಧರು.

ಮೃತರ ಸುದ್ದಿ ತಿಳಿದ ಕುಟುಂಬಸ್ಥರು, ಸಂಬಂಧಿಕ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಯೋಧರು ಸೇನಾ ವಾಹನದದಲ್ಲಿ ಸಾಗುತ್ತಿದ್ದರು. ವಾಹನವು ಕಿರಿದಾದ ರಸ್ತೆಯಿಂದ ಜಾರಿ ಅಂದಾಜು 150ಅಡಿ ಆಳದ ಕಮರಿಗೆ ಉರುಳಿತು. ವಾಹನವು ರಸ್ತೆಯಿಂದ ಜಾರಿದ್ದು ಏಕೆ ಎಂದ ಬಗ್ಗೆ ತನಿಖೆ ನಡೆದಿದೆ.

 

Tags:
error: Content is protected !!