ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ ಎಸಗಿದ ದ್ರೋಹವಾಗಿದೆ. ಗ್ರಾಹಕರಿಗೆ ಪ್ರತಿಯೊಂದು ಲೀಟರ್‌ನಲ್ಲಿ ೬೦ ರಿಂದ ೧೦೦ ಮಿ.ಲೀ. ವರೆಗೆ ಇಂಧನ ಕಡಿಮೆ ನೀಡಿ ದಿನನಿತ್ಯ ಬಹಿರಂಗ ದರೋಡೆ ಮಾಡಲಾಗುತ್ತಿದೆ.
ಕೇವಲ ೧೦೧ ಬಂಕ್‌ಗಳ ಮೇಲೆ ಪ್ರಕರಣ ದಾಖಲಿಸಿ ೬.೬೬ ಲಕ್ಷ ರೂ. ದಂಡ ವಿಽಸಿರುವುದು ತೀರಾ ಕಣ್ಣೊರೆಸುವ ತಂತ್ರ. ೬೦೦೦ ಬಂಕ್‌ಗಳಿರುವ ರಾಜ್ಯದಲ್ಲಿ ಈ ಸಣ್ಣ ದಂಡದ ಮೊತ್ತವು ವಂಚಕರಿಗೆ ಯಾವುದೇ ಭಯ ಹುಟ್ಟಿಸುವುದಿಲ್ಲ. ಇಂತಹ ಲೂಟಿಕೋರ ಬಂಕ್‌ಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು. ಕೇವಲ ಸಣ್ಣಮೊತ್ತದ ದಂಡ ಹಾಕುವುದನ್ನು ಬಿಟ್ಟು, ವಂಚಕ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ರಾಜದ್ಯಂತ ನಿಯಮಿತ ಮತ್ತು ದಿಢೀರ್ ತಪಾಸಣೆಗಳು ನಡೆಯಬೇಕು. ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಇಂತಹ ಕೆಲಸ ಕೊನೆಗಾಣಿಸಲು ಸರ್ಕಾರ ಮುಂದಾಗಲಿ.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು




